ಕಲರ್ಸ್ ಕನ್ನಡದ 'ಹಾಡು ಕರ್ನಾಟಕ' ಶೋ ಮೂಲಕ ಸಂಗೀತ ನಿರ್ದೇಶಕ ಹರಿಕೃಷ್ಣ ಕಿರುತೆರೆಯಲ್ಲಿ ಮೋಡಿ ಮಾಡಲು ಸಿದ್ಧರಾಗಿದ್ದಾರೆ. ಸಾಮಾನ್ಯ ಜನರಿಗೂ ಹಾಡುವ ಅವಕಾಶ ನೀಡಲು ಕಲರ್ಸ್ ಕನ್ನಡ ವೇದಿಕೆ ಒದಗಿಸುತ್ತಿದ್ದು, ಈ ಶೋನಲ್ಲಿ ಹರಿಕೃಷ್ಣ ತೀರ್ಪುಗಾರರಾಗಿದ್ದಾರೆ. ಇವರೊಂದಿಗೆ ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ, ರಘು ದೀಕ್ಷಿತ್, ಗಾಯಕಿ ಇಂದು ನಾಗರಾಜ್, ವಾರಿಜಾ ಶ್ರೀ ಸಹ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.
ಕಿರುತೆರೆಗೆ ಎಂಟ್ರಿ ಕೊಟ್ರು ಸಂಗೀತ ನಿರ್ದೇಶಕ ಹರಿಕೃಷ್ಣ - ಕಲರ್ಸ್ ಕನ್ನಡ ವಾಹಿನಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಕ್ಕೆ ಸಿದ್ಧವಾಗಿರುವ ಹಾಡು ಕರ್ನಾಟಕ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಸಂಗೀತ ನಿರ್ದೇಶಕ ಹರಿಕೃಷ್ಠ ಭಾಗವಹಿಸಲಿದ್ದಾರೆ.
ಕಿರುತೆರೆಗೆ ಎಂಟ್ರಿ ಕೊಟ್ರು ಸಂಗೀತ ನಿರ್ದೇಶಕ ಹರಿಕೃಷ್ಣ
ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಚಂದನಾ ಆನಂತಕೃಷ್ಣ ಈ ಕಾರ್ಯಕ್ರಮದ ಮೂಲಕ ಮೊದಲ ಬಾರಿಗೆ ನಿರೂಪಕರಾಗುತ್ತಿದ್ದಾರೆ. ಸದ್ಯದಲ್ಲೇ ಈ ಶೋ ಆರಂಭವಾಗಲಿದೆ. ಶೋನ ಪ್ರೊಮೋ ಈಗಾಗಲೇ ಬಿಡುಗಡೆಯಾಗಿದ್ದು, ಸದ್ದು ಮಾಡುತ್ತಿದೆ.
ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋಗಳಿಗೆ ಸಿನಿಮಾ ತಾರೆಯರು ನಿರೂಪಕರಾಗುವುದು, ಜಡ್ಜ್ಗಳಾಗುವುದು ಸಾಮಾನ್ಯವಾಗಿದೆ. ಆದರೆ, ತಾವಾಯಿತು ತಮ್ಮ ಸಂಗೀತವಾಯಿತು ಎಂದುಕೊಂಡಿದ್ದ ಹರಿಕೃಷ್ಣ ಕಿರುತೆರೆಗೆ ಬಂದಿರುವುದು ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.