ಕರ್ನಾಟಕ

karnataka

ETV Bharat / sitara

ಹೂಮಳೆ ಧಾರಾವಾಹಿಯ ಲಹರಿ ಪಾತ್ರ ನನಗೆ ತುಂಬಾನೇ ಖುಷಿ ನೀಡಿದೆ: ಚಂದನಾ - ನಟಿ ಚಂದನಾ,

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂಮಳೆ ಧಾರಾವಾಹಿಯಲ್ಲಿ ನಾಯಕಿ ಲಹರಿ ಆಗಿ ಅಭಿನಯಿಸುತ್ತಿರುವ ಚೆಂದುಳ್ಳಿ ಚೆಲುವೆ ಚಂದನಾ ತುಂಬಾ ಖುಷಿಯಾಗಿದ್ದಾರೆ.‌ ಅದಕ್ಕೆ ಕಾರಣವೂ ಇದೆ. ಚಂದನಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹೂಮಳೆ ಧಾರಾವಾಹಿಯು ಇತ್ತೀಚೆಗಷ್ಟೇ ಯಶಸ್ವಿ ನೂರು ದಿನ ಪೂರೈಸಿದೆ.

Happy on Lahari role, Happy on Lahari role says actress Chandana, actress Chandana, actress Chandana news, ಲಹರಿ ಪಾತ್ರ ಸಂತೋಷವಿದೆ, ಲಹರಿ ಪಾತ್ರ ಸಂತೋಷವಿದೆ ಎಂದ ನಟಿ ಚಂದನಾ, ನಟಿ ಚಂದನಾ, ನಟಿ ಚಂದನಾ ಸುದ್ದಿ,
ನಟಿ ಚಂದನಾ

By

Published : Apr 15, 2021, 6:27 AM IST

ಹೂಮಳೆ ಧಾರಾವಾಹಿಯು ಈಗಾಗಲೇ ಯಶಸ್ವಿ ನೂರು ದಿನ ಪೂರೈಸಿದೆ. ಲಹರಿ ಪಾತ್ರವನ್ನು ಜನ ಸ್ವೀಕರಿಸಿದ್ದಾರೆ ಎಂಬುದಕ್ಕೆ ಅವರಿಂದು ನನ್ನನ್ನು ಲಹರಿಯಾಗಿ ಗುರುತಿಸುವುದೇ ಸಾಕ್ಷಿ. ಇದಕ್ಕಿಂತಲೂ ಮೊದಲು ಜನ ರಾಜರಾಣಿ ಚುಕ್ಕಿ ಎಂದು ಕರೆಯುತ್ತಿದ್ದರು. ಮುಂದೆ ಬಿಗ್ ಬಾಸ್ ಸ್ಪರ್ಧಿಯಾಗಿ ಗುರುತಿಸುತ್ತಿದ್ದರು. ಆದರೆ ಇದೀಗ ನನ್ನನ್ನು ಲಹರಿ ಎಂದೇ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ಜನರ ಮನಸ್ಸಿಗೆ ತಟ್ಟಿದೆ. ಅವರ ಪ್ರೀತಿ ಕಂಡು ತುಂಬಾ ಖುಷಿಯಾಗುತ್ತದೆ ಎಂದು ಹೇಳುತ್ತಾರೆ ಚಂದನಾ ಅನಂತಕೃಷ್ಣ.

ನಟಿ ಚಂದನಾ

ರಾಜರಾಣಿ ಧಾರಾವಾಹಿಯಲ್ಲಿ ನಾಯಕಿ ಚುಕ್ಕಿಯಾಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಬಂದ ಚಂದನಾ ಜನಪ್ರಿಯತೆ ಪಡೆದಿದ್ದು ಬಿಗ್ ಬಾಸ್ ಮೂಲಕ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚಂದನಾ ದೊಡ್ಮನೆಯಿಂದ ಬಂದ ಬಳಿಕ ನಿರೂಪಕಿಯಾಗಿ ಅವಕಾಶ ಪಡೆದರು.

ನಟಿ ಚಂದನಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಹಾಡು ಕರ್ನಾಟಕದ ನಿರೂಪಕಿಯಾಗಿ ಮನ ಸೆಳೆದ ಚಂದನಾ ಸದ್ಯ ಹೂಮಳೆ ಧಾರಾವಾಹಿಯ ಲಹರಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ನಟಿ ಚಂದನಾ

ABOUT THE AUTHOR

...view details