ಕರ್ನಾಟಕ

karnataka

ETV Bharat / sitara

'ರಾಧೆ' ಸುತನಿಗೆ ಮೊದಲ ವರ್ಷದ ಹುಟ್ಟುಹಬ್ಬ: ಹ್ಯಾಪಿ ಬರ್ತಡೇ ಯಥರ್ವ್​​ - ಯಶ್​​ ಮಗ ಯಥರ್ವ

ಯಶ್​-ರಾಧಿಕಾ ಮುದ್ದಿನ ಮಗನಿಗೆ ಇಂದು ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮಗನ ಹುಟ್ಟುಹಬ್ಬಕ್ಕೆ ತಮ್ಮ ಸೋಷಿಯಲ್​​ ಮೀಡಿಯಾದಲ್ಲಿ ಮುದ್ದಾದ ಫೋಟೋಗಳನ್ನು ಕೊಲಾಜ್​ ಮಾಡಿ ಪೋಸ್ಟ್​​ ಮಾಡಿರುವ ನಟಿ ರಾಧಿಕಾ ಪಂಡಿತ್​​, ಯಾವಾಗಲೂ, ಎಂದೆಂದಿಗೂ ನನಗೆ ನೀನು ಬೇಬಿ ಬಾಯ್,​ ಹ್ಯಾಪಿ ಬರ್ತಡೇ ಲವ್​ ಯು ಎಂದಿದ್ದಾರೆ.

happy birthday yatjarva
'ರಾಧೆ'ಸುತನಿಗೆ ಮೊದಲ ವರ್ಷದ ಹುಟ್ಟುಹಬ್ಬ : ಹ್ಯಾಪಿ ಬರ್ತ್​​ ಡೇ ಯಥರ್ವ್​​

By

Published : Oct 30, 2020, 1:08 PM IST

ಇಂದು ರಾಕಿಂಗ್​​ಸ್ಟಾರ್​ ಯಶ್​​ ಮುದ್ದಿನ ಮಗ ಯಥರ್ವ​ಗೆ ಮೊದಲನೇ ವರ್ಷದ ಹುಟ್ಟುಹಬ್ಬ. ಕಳೆದೆ 2019ರ ಅಕ್ಟೋಬರ್​​ 30ರಂದು ಯಥರ್ವ್​​ ಜನಿಸಿದ್ದ. ಇಂದಿಗೆ ಒಂದು ವರ್ಷ ಪೂರೈಸಿರುವ ಮುದ್ದು ಮಗನಿಗೆ ಸ್ಯಾಂಡಲ್​​ವುಡ್​​ ಸಿಂಡ್ರೆಲ್ಲಾ ರಾಧಿಕಾ ಪಂಡಿತ್​​ ವಿಶ್​ ಮಾಡಿದ್ದಾರೆ.

ತಮ್ಮ ಸೋಷಿಯಲ್​​ ಮೀಡಿಯಾದಲ್ಲಿ ಮುದ್ದಾದ ಫೋಟೋಗಳನ್ನು ಕೊಲಾಜ್​ ಮಾಡಿ ಪೋಸ್ಟ್​​ ಮಾಡಿರುವ ನಟಿ ರಾಧಿಕಾ ಪಂಡಿತ್​​, ಯಾವಾಗಲೂ, ಎಂದೆಂದಿಗೂ ನನಗೆ ನೀನು ಬೇಬಿ ಬಾಯ್,​ ಹ್ಯಾಪಿ ಬರ್ತಡೇ ಲವ್​ ಯು ಎಂದು ಪೋಸ್ಟ್​ ಮಾಡಿದ್ದಾರೆ.

ಹ್ಯಾಪಿ ಬರ್ತಡೇ ಯಥರ್ವ್​​

ತಮ್ಮ ಇನ್​ಸ್ಟಾಗ್ರಾಮ್​​​ನಲ್ಲಿ ಯಥರ್ವ್​​​ ಕೆಲವು ಅಪರೂಪದ ಫೋಟೋಗಳನ್ನು ರಾಧಿಕಾ ಪಂಡಿತ್​​ ಶೇರ್​​ ಮಾಡಿದ್ದಾರೆ. ಕೊರೊನಾ ಇರುವುದರಿಂದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ. ಕೇವಲ ಕುಟುಂಬಸ್ಥರ ಜೊತೆ ಬರ್ತಡೇ ಸೆಲೆಬ್ರೇಟ್​ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

ಹ್ಯಾಪಿ ಬರ್ತಡೇ ಯಥರ್ವ್​​

ABOUT THE AUTHOR

...view details