ಡಾರ್ಲಿಂಗ್ ಪ್ರಭಾಸ್ ಇಂದು 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ಯಾನ್ ಇಂಡಿಯಾ ನಟನ ಬರ್ತ್ ಡೇಗೆ ದೇಶಾದ್ಯಂತ ಅಭಿಮಾನಿಗಳು ಶುಭಾಶಯದ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ 'ಡಾರ್ಲಿಂಗ್': ಹ್ಯಾಪಿ ಬರ್ತ್ಡೇ 'ರಾಧೆ ಶ್ಯಾಮ್' - happy birthday darling
ಡಾರ್ಲಿಂಗ್ ಪ್ರಭಾಸ್ ಇಂದು 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಬಾಹುಬಲಿ ಸಿನಿಮಾ ನಂತ್ರ ಸಾಹೋ ಸಿನಿಮಾದಲ್ಲಿ ಮಿಂಚಿದ ಪ್ರಭಾಸ್, ಇದೀಗ ರಾಧೆ ಶ್ಯಾಮ್ ಎಂಬ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಸಖತ್ ಸುದ್ದಿಯಲ್ಲಿರುವ ರಾಧ ಕೃಷ್ಣಕುಮಾರ್ ನಿರ್ದೇಶನದ ರಾಧೆ ಶಾಮ್ ಸಿನಿಮಾ, ಡಾರ್ಲಿಂಗ್ ಹುಟ್ಟುಹಬ್ಬಕ್ಕೆ ಮೂರು ದಿನದ ಮುಂಚೆಯೇ ಚಿತ್ರದಲ್ಲಿ ಪ್ರಭಾಸ್ ಅವರ ಫಸ್ಟ್ಲುಕ್ ರಿವೀಲ್ ಮಾಡಿತ್ತು. ಈ ಲುಕ್ ಜೊತೆ ಅಡ್ವಾನ್ಸ್ ಹ್ಯಾಪಿ ಬರ್ತ್ಡೇ ಪ್ರಭಾಸ್ ಎಂದು ಚಿತ್ರತಂಡ ಹೇಳಿತ್ತು.
ಇನ್ನು ರಾಧೆ ಶ್ಯಾಮ್ ಸಿನಿಮಾ ಹೊರತುಪಡಿಸಿ ಮಾತನಾಡುವುದಾದರೆ ಪ್ರಭಾಸ್ ಬಳಿ ಮತ್ತೊಂದು ಸಿನಿಮಾ ಇದೆ. ಹೌದು ಬಾಲಿವುಡ್ನ ಓ ರಾವುತ್ ನಿರ್ದೇಶನದ ಆದಿ ಪುರುಷ್ ಚಿತ್ರಕ್ಕೂ ಪ್ರಭಾಸ್ ಅವರೇ ನಾಯಕ. ಬರ್ತ್ ಡೇ ಪ್ರಯುಕ್ತ ಆದಿ ಪುರುಷ್ ತಂಡದಿಂದ ಏನಾದ್ರೂ ಹೊಸ ಸುದ್ದಿ ಸಿಗುತ್ತಾ ಅನ್ನೋದೇ ಡಾರ್ಲಿಂಗ್ ಅಭಿಮಾನಿಗಳ ಕುತೂಹಲ.