ಮುಂಬೈ: ಬಾಲಿವುಡ್ ಧಾರಾವಾಹಿಗಳ ನಿರ್ಮಾಪಕಿ ಏಕ್ತಾ ಕಪೂರ್ ಇಂದು 45ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರ ಯಶಸ್ಸಿನ ಹಾದಿಯಲ್ಲಿ ಹಲವು ವಿವಾದಗಳನ್ನು ತಮ್ಮ ಮೇಲೆ ಎಳೆದುಕೊಂಡಿರುವ ಇವರು, ಕಾಂಟ್ರವರ್ಸಿ ಕ್ವೀನ್ ಅಂತಾನೆ ಕಡೆಸಿಕೊಂಡಿದ್ದಾರೆ.
ಕಾಂಟ್ರವರ್ಸಿ ಕ್ವೀನ್ ಏಕ್ತಾ ಕಪೂರ್ಗೆ ಇಂದು 45ನೇ ಹುಟ್ಟು ಹಬ್ಬ - ekta kapoor birthday
ವಿವಾದಗಳ ರಾಣಿ ಎಂದೇ ಕರೆಸಿಕೊಳ್ಳುವ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಇಂದು 45ನೇ ಹುಟ್ಟ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ವಿವಾದಗಳ ರಾಣಿ ಏಕ್ತಾಗೆ ಇಂದು 45ನೇ ಹುಟ್ಟು ಹಬ್ಬ
ಇವರ ವಿವಾದಗಳಿಗೆ ಉಡುಪು, ನಡೆಸಿಕೊಡುವ ಶೋ, ಇವರ ವೈಯಕ್ತಿಕ ಜೀವನವೇ ಕಾರಣ ಅಂತಾರೆ ಕೆಲವರು. ಇನ್ನು ಇವರ ಮಾರ್ಗದರ್ಶನದಲ್ಲಿ ಬಾಲಾಜಿ ಟೆಲಿಫಿಲ್ಮ್ ಉತ್ತುಂಗ ಮಟ್ಟಕ್ಕೆ ಬೆಳೆಯಿತು. ಅಲ್ಲದೆ ಕಳೆದ ಎರಡು ದಶಕಗಳಿಂದ ಕೂಡ ಏಕ್ತಾ ಹೊರ ತರುವ ಕಾರ್ಯಕ್ರಮ ಹಾಗೂ ಧಾರಾವಾಹಿಗಳು ಟಿಆರ್ಪಿಯನ್ನು ಹೆಚ್ಚಿವೆ.
ಏಕ್ತಾ ಕೇವಲ ಧಾರಾವಾಹಿ ಲೋಕದಲ್ಲಿ ಮಾತ್ರ ಯಶಸ್ಸು ಕಾಣಲಿಲ್ಲ. ಬಾಲಿವುಡ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದಾರೆ. ಇವರ ನಿರ್ಮಾಣದಲ್ಲಿ ರಾಗಿಣಿ ಎಂಎಂಎಸ್, ದಿ ಡರ್ಟಿ ಪಿಕ್ಚರ್, ಡ್ರೀಮ್ ಗರ್ಲ್ ಸಿನಿಮಾಗಳು ದೊಡ್ಡ ಸಕ್ಸಸ್ ಕಂಡಿವೆ.