ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 38 ವಸಂತಗಳನ್ನು ಪೂರೈಸಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ತಮ್ಮ ನೆಚ್ಚನ ನಟನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವನ್ನು ಹರಿಸುತ್ತಿದ್ದಾರೆ.
ಹ್ಯಾಪಿ ಬರ್ತ್ ಡೆ ಶ್ರೀಮುರುಳಿ : 39ನೇ ವಸಂತಕ್ಕೆ ಕಾಲಿಟ್ಟ ಅಗಸ್ತ್ಯ - prashanrh neel surprises to shree muruli
ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 38 ವಸಂತಗಳನ್ನು ಪೂರೈಸಿ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಶ್ರೀಮುರುಳಿಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಎರಡು ಸರ್ಪ್ರೈಸ್ ನೀಡಿದ್ದಾರೆ.
![ಹ್ಯಾಪಿ ಬರ್ತ್ ಡೆ ಶ್ರೀಮುರುಳಿ : 39ನೇ ವಸಂತಕ್ಕೆ ಕಾಲಿಟ್ಟ ಅಗಸ್ತ್ಯ happy birth day shri muruli](https://etvbharatimages.akamaized.net/etvbharat/prod-images/768-512-5397175-thumbnail-3x2-giri11111.jpg)
ಸದ್ಯ ಭರಾಟೆ ಯಶಸ್ಸಿನಲ್ಲಿರುವ ಶ್ರೀಮುರುಳಿ ಜನವರಿಯಿಂದ 'ಮದಗಜ' ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಲಿದ್ದಾರೆ. ಈ ಸಿನಿಮಾಕ್ಕೆ ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೂ ಉಮಾಪತಿ ಶ್ರೀನಿವಾಸ್ ಹಣ ಹೂಡುತ್ತಿದ್ದಾರೆ. ಈ ಹಿಂದೆ ಮದಗಜ ಹೆಸರಿನ ಬಗ್ಗೆ ಗೊಂದಲಗಳಿದ್ದು, ಸಿನಿಮಾಕ್ಕೆ ಮದಗಜ ಟೈಟಲ್ ಇಡಲಾಗುವುದಿಲ್ಲ ಎಂದು ಹೇಳಲಾಗಿತ್ತು. ಇದೀಗ ಅಧಿಕೃತವಾಗಿ ಶ್ರೀಮುರುಳಿಯ ಮುಂದಿನ ಚಿತ್ರಕ್ಕೆ ಮದಗಜ ಎಂದು ಹೆಸರಿಡಲಾಗಿದೆ.
ಇನ್ನು ಶ್ರೀಮುರುಳಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಪ್ರಶಾಂತ್ ನೀಲ್ ಕಥೆ ಬರೆಯುತ್ತಿದ್ದು, ಬಂಡವಾಳವನ್ನೂ ಹೂಡಲಿದ್ದಾರೆ. ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
TAGGED:
happy birth day shri muruli