ಕರ್ನಾಟಕ

karnataka

90 ವರ್ಷ ಪೂರೈಸಿದ ಗಾನ ಕೋಗಿಲೆ: ಹ್ಯಾಪಿ ಬರ್ತ್​​ ಡೇ ಲತಾಜಿ!

By

Published : Sep 28, 2019, 4:15 PM IST

ಲತಾ ಮಂಗೇಶ್ಕರ್​ಗೆ ಇಂದು 90ನೇ ಹುಟ್ಟು ಹಬ್ಬ. ಸುಮಾರು 36 ಸಾವಿರ ಹಾಡುಗಳನ್ನು ಹಾಡಿರುವ ಲತಾಜಿ ಮತ್ತು ಮಹಮದ್​ ರಫಿ ಕಾಂಬಿನೇಷನ್​ ತುಂಬಾ ಸೊಗಸಾಗಿ ಮೂಡಿಬರುತ್ತಿತ್ತು. ಅಲ್ಲದೇ ಇಂದಿಗೂ ಈ ಇಬ್ಬರ ಡ್ಯೂಯೆಟ್​ ಹಾಡುಗಳು ಪ್ರೇಮಿಗಳ ಮನ ಸೂರೆಗೊಂಡಿವೆ

90 ವರ್ಷ ಪೂರೈಸಿದ ಗಾನ ಕೋಗಿಲೆ: ಹ್ಯಾಪಿ ಬರ್ತ್​​ ಡೇ ಲತಾಜಿ

ಗಾನಕೋಗಿಲೆ ಎಂದೇ ಕರೆಸಿಕೊಳ್ಳುವ ಲತಾ ಮಂಗೇಶ್ಕರ್​ಗೆ ಇಂದು 90ನೇ ಹುಟ್ಟು ಹಬ್ಬ. ದೇಶದ ಸರಿ ಸುಮಾರು ಭಾಷೆಗಳಲ್ಲಿನ ಹಾಡುಗಳಿಗೆ ತಮ್ಮ ಕಂಠದಾನ ಮಾಡಿದ್ದಾರೆ.

ಸುಮಾರು 36 ಸಾವಿರ ಹಾಡುಗಳನ್ನು ಹಾಡಿರುವ ಲತಾಜಿ ಮತ್ತು ಮಹಮದ್​ ರಫಿ ಕಾಂಬಿನೇಷನ್​ ತುಂಬಾ ಸೊಗಸಾಗಿ ಮೂಡಿಬರುತ್ತಿತ್ತು. ಅಲ್ಲದೇ ಇಂದಿಗೂ ಈ ಇಬ್ಬರ ಡ್ಯುಯೆಟ್​ ಹಾಡುಗಳು ಪ್ರೇಮಿಗಳ ಮನ ಸೂರೆ ಮಾಡಿವೆ.

ಕುಟುಂಬದಿಂದಲೇ ಇವರಿಗೆ ಸಂಗೀತದ ಕಲೆ ಒಲಿದು ಬಂದಿತ್ತು. ಲತಾಜಿ ತಂದೆ ದೀನಾನಾಥ್​ ಕೂಡ ಸಂಗೀತಗಾರನಾಗಿದ್ದು, ಇವರ ನಿಧನದ ನಂತರ ಅನಿವಾರ್ಯವಾಗಿ ಲತಾ ಮಂಗೇಶ್ಕರ್​ ಸಂಗೀತ ಲೋಕಕ್ಕೆ ಪದಾರ್ಪಣೆ ಮಾಡಿದರು.

ಇವರ ಸಂಗೀತ ಲೋಕದ ಸಾಧನೆಯನ್ನು ಗುರುತಿಸಿ ಮೂರು ರಾಷ್ಟ್ರೀಯ ಪ್ರಶಸ್ತಿಗಳು, ಆರು ಫಿಲ್ಮ್​​ ಫೇರ್​ ಅವಾರ್ಡ್ಸ್​​ ಲಭಿಸಿವೆ. ಇನ್ನು 2001ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕೂ ಇವರು ಭಾಜನರಾಗಿದ್ದಾರೆ.

ABOUT THE AUTHOR

...view details