ಕರ್ನಾಟಕ

karnataka

ETV Bharat / sitara

'ನಿನ್ಗೆ ಕಷ್ಟ ಆದ್ರೂ ನನ್ನನ್ನು ಸಂಬಾಳಿಸುವುದಕ್ಕೆ ಥ್ಯಾಂಕ್ಯು' - ನಟಿ ಸನ್ನಿ ಲಿಯೋನ್​​

ಡೇನಿಯಲ್​​ ವೆಬರ್​​ ಬರ್ತ್​​ ಡೇಗೆ ಪತ್ನಿ ಸನ್ನಿಲಿಯೋನ್​​ ತಮ್ಮ ಮುದ್ದಾದ ಬರಹದ ಮೂಲಕ ವಿಶ್​​ ಮಾಡಿದ್ದಾರೆ.

happy birth day Daniel Weber
'ನಿನ್ಗೆ ಕಷ್ಟ ಆದ್ರೂ ನನ್ನನ್ನು ಸಂಬಾಳಿಸುವುದಕ್ಕೆ ಥ್ಯಾಂಕ್ಯು'

By

Published : Oct 21, 2020, 2:26 PM IST

ನಿನ್ನೆ ಪಡ್ಡೆ ಹುಡುಗರ ಹೃದಯ ಕದ್ದ ಹಾಟ್​​ ಬೆಡಗಿ ಸನ್ನಿ ಲಿಯೋನ್​​ ಪತಿ ಡೇನಿಯಲ್​​ ವೆಬರ್​​ ಬರ್ತ್​​ ಡೇ ಇತ್ತು. ಈ ಸಂಭ್ರಮವನ್ನು ಸನ್ನಿಲಿಯೋನ್​​ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​​ ಮಾಡಿದ್ದಾರೆ.

ಪತಿ ಬರ್ತ್​​ ಡೇಗೆ ಬರಹದ ಮೂಲಕ ವಿಶ್​​ ಮಾಡಿರುವ ಸನ್ನಿ, ಹುಟ್ಟುಹಬ್ಬದ ಶುಭಾಷಯಗಳು. ಜೀವನವು ತುಂಬಾ ಕ್ರೇಜಿಯಾಗಿದೆ. ಕೆಲವು ಬಾರಿ ನನ್ನನ್ನು ಸಂಬಾಳಿಸುವುದು ತುಂಬಾ ಕಷ್ಟ. ಆದ್ರೂ ಕೂಡ ನೀನು ಎಲ್ಲವನ್ನು ಅನುಸರಿಸಿಕೊಂಡು ಹೋಗುತ್ತಿದ್ದಿಯಾ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ನನ್ನನ್ನು ಮತ್ತು ಮಕ್ಕಳನ್ನು ತುಂಬಾ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಿಯ. ಮಕ್ಕಳಿಗೆ ಒಳ್ಳೆಯ ತಂದೆಯಾಗಿ, ಪತ್ನಿಗೆ ಒಳ್ಳೆಯ ಗಂಡನಾಗಿರುವೆ.

ಮುಂದಿನ ದಿನಗಳನ್ನೂ ಒಟ್ಟಿಗೆ ಕಳೆಯೋಣ. ನನ್ನ ಪ್ರೀತಿಯ ಪತಿದೇವ, ಹ್ಯಾಪಿ ಬರ್ತ್​​ ಡೇ ಎಂದು ಸನ್ನಿ ಹೇಳಿದ್ದಾರೆ.

ABOUT THE AUTHOR

...view details