ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯು' ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ಚೆಂದದ ಹಾಡುಗಳನ್ನು ನೀಡಿ ಚಂದನವನದಲ್ಲಿ ನೆಲೆಯೂರಿರುವ ಸಂಗೀತ ನಿರ್ದೇಶಕ ಡಾ. ಕಿರಣ್ ತೋಟಂಬೈಲು ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಡಾ. ಕಿರಣ್ 'ನವಿಲು ಗರಿ' ಆಲ್ಬಂ ಹಾಡು ಬಿಡುಗಡೆ ಮಾಡಿ ಶುಭ ಕೋರಿದ ನಾದಬ್ರಹ್ಮ - Sandalwood music director
ತಮ್ಮ ಸ್ನೇಹಿತನ ಮದುವೆಗಾಗಿ ಡಾ. ಕಿರಣ್ ತೋಟಂಬೈಲು ಸಾಹಿತ್ಯ ಬರೆದು ಸಂಗೀತ ನಿರ್ದೇಶಿಸಿದ್ದ 'ನವಿಲು ಗರಿ' ಆಲ್ಬಂ ಹಾಡನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆ ಮಾಡಿದ್ದಾರೆ.

ಇದರ ನಡುವೆ ಡಾ.ಕಿರಣ್ ತಮ್ಮ ಸ್ನೇಹಿತನ ಲವ್ ಸ್ಟೋರಿಗೆ ಸರ್ಪ್ರೈಸ್ ಗಿಫ್ಟ್ ಕೊಡುವ ಸಲುವಾಗಿ ಎಲ್ಎಲ್ ಆಲಾಪನಾ ಆಡಿಯೋ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಡಾ. ಕಿರಣ್ ತಮ್ಮ ಆಲಾಪನಾ ಆಡಿಯೋ ಸಂಸ್ಥೆ ಮೂಲಕ ಸ್ನೇಹಿತನ ಮದುವೆಗೆ ಗಿಫ್ಟ್ ಆಗಿ ಒಂದು ಆಲ್ಬಂ ಸಾಂಗ್ ರೆಡಿ ಮಾಡಿದ್ದು. ಅದಕ್ಕೆ 'ನವಿಲು ಗರಿ' ಎಂದು ಹೆಸರಿಟ್ಟಿದ್ದಾರೆ. ಆಲ್ಬಂ ಸಾಂಗನ್ನು ನಾದಬ್ರಹ್ಮ ಹಂಸಲೇಖ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ.
ಡಾ. ಕಿರಣ್ ಅವರ ಹೊಸ ಹೆಜ್ಜೆಗೆ ಸ್ಯಾಂಡಲ್ವುಡ್ ಕೂಡಾ ಶುಭ ಹಾರೈಸಿದೆ. ಡಾ. ಕಿರಣ್ ಅವರೇ 'ನವಿಲುಗರಿ' ಹಾಡಿಗೆ ಸಾಹಿತ್ಯ ಬರೆದಿದ್ದು, ಸಂಗೀತ ಒದಗಿಸಿದ್ದಾರೆ. ರಾಜೇಶ್ ಕೃಷ್ಣನ್ ಹಾಗೂ ಅನುರಾಧಾ ಭಟ್ ಈ ಹಾಡು ಹಾಡಿದ್ದಾರೆ. ಯೂಟ್ಯೂಬ್ನಲ್ಲಿ ಕೂಡಾ ಈ ಹಾಡು ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.