ಸುಬ್ರಹ್ಮಣ್ಯ :ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮಂಗಳೂರು-ಬೆಂಗಳೂರು ಸಂಚಾರ ಮಾಡುವ ವಿಸ್ತಾಡೋಮ್ ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕ ಪ್ರಕೃತಿ ಸೌಂದರ್ಯ ಸವಿದಿದ್ದಾರೆ.
ಮಂಗಳೂರು-ಬೆಂಗಳೂರು ಸಂಚಾರದ ನಡುವೆ ಸಕಲೇಶಪುರ-ಶಿರಾಡಿ ಘಾಟಿ ಪ್ರಕೃತಿ ಸೌಂದರ್ಯ ವೀಕ್ಷಣೆ ಮಾಡುವ ಸಲುವಾಗಿ ಭಾರತೀಯ ರೈಲ್ವೆ ಆರಂಭಿಸಿದ ವಿಸ್ತಾಡೋಮ್ ರೈಲು ಈಗಾಗಲೇ ಪ್ರವಾಸಿಗರ ಮೆಚ್ಚುಗೆ ಪಡೆದಿದೆ. ಈ ರೈಲಿನಲ್ಲಿ ಇಂದು ಕರ್ನಾಟಕದ ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಸಂಚಾರ ಮಾಡಿ ಪ್ರಕೃತಿ ಸೌಂದರ್ಯದ ಸೊಬಗನ್ನು ಅನುಭವಿಸಿದ್ದಾರೆ.