ಕರ್ನಾಟಕ

karnataka

ETV Bharat / sitara

ಆಯುಷ್ಮಾನ್​ಭವ ಚಿತ್ರದ ಮೂಲಕ ಮತ್ತೊಂದು ಬ್ರೇಕ್​ ಪಡೆದ ಗುರುಕಿರಣ್​​​

ಗಾಯಕನಾಗುವ ಉದ್ದೇಶದಿಂದ ಗುರುಕಿರಣ್​​​​​​​​​​​​​​​​​​​​​​​​​​​​​​​​​​​​​ ಸ್ಯಾಂಡಲ್​ವುಡ್​​ಗೆ ಕಾಲಿಟ್ಟರು. 'ಎ' ಚಿತ್ರದ ನಂತರ 'ಉಪೇಂದ್ರ' ಚಿತ್ರಕ್ಕೆ ಅವರು ಸಂಗೀತ ನಿರ್ದೇಶಿಸಿದರೂ ಹೆಚ್ಚು ಅವಕಾಶ ದೊರೆಯಲಿಲ್ಲ. ಒಂದು ವೇಳೆ 'ಚಿತ್ರ' ಹಿಟ್ ಆಗದಿದ್ದರೆ ಮಂಗಳೂರಿಗೆ ಗಂಟುಮೂಟೆ ಕಟ್ಟಬೇಕು ಎಂದುಕೊಂಡಿದ್ದ ಗುರುಗೆ ಅದೃಷ್ಟ ಖುಲಾಯಿಸಿತು.

ಗುರುಕಿರಣ್

By

Published : Nov 16, 2019, 8:45 PM IST

ಗುರುಕಿರಣ್, ಕನ್ನಡ ಚಿತ್ರರಂಗದಲ್ಲಿ ತಮ್ಮ ಗುಂಗುರು ಕೂದಲು ಹಾಗೂ ಹಿಟ್​ ಹಾಡುಗಳಿಂದಲೇ ಗುರುತಿಸಿಕೊಂಡಿರುವ ಸಂಗೀತ ನೀರ್ದೇಶಕ. ಶಿವರಾಜ್​​​ಕುಮಾರ್ ಅಭಿನಯದ 'ಆಯುಷ್ಮಾನ್​ಭವ' ಚಿತ್ರದಿಂದ ಗುರುಕಿರಣ್​ಗೆ ಮತ್ತೊಂದು ಬ್ರೇಕ್ ಸಿಕ್ಕಿದೆ ಎನ್ನಬಹುದು.

ಸಂಗೀತ ನಿರ್ದೇಶಕ ಗುರುಕಿರಣ್

'ಆಯುಷ್ಮಾನ್​ಭವ' ಚಿತ್ರ ಗುರುಕಿರಣ್ ಸಂಗೀತ ನಿದೇಶನದ 100ನೇ ಸಿನಿಮಾ. ಈ ಚಿತ್ರದ ಮೂಲಕ ಗುರುಕಿರಣ್ ಸಂಗೀತದಲ್ಲಿ ಮತ್ತೆ ಮೋಡಿದ ಮಾಡಿದ್ದಾರೆ. ಪಿ.ವಾಸು ಹಾಗೂ ಗುರುಕಿರಣ್ ಕಾಂಬಿನೇಶನ್​​ನಲ್ಲಿ ಇದು 6ನೇ ಸಿನಿಮಾ. 'ಆಯುಷ್ಮಾನ್​ಭವ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ಆಫರ್ ದೊರಕಿದ್ದು ಗುರುಕಿರಣ್​ಗೆ ಸಂತೋಷದ ಜೊತೆಗೆ ಹೆಚ್ಚು ಜವಾಬ್ದಾರಿ ಇದ್ದಿದ್ದರಿಂದ ಭಯ ಕೂಡಾ ಇತ್ತಂತೆ. ಈ ಚಿತ್ರಕ್ಕೆ ಸಂಗೀತ ನೀಡುವುದು ಅವರಿಗೆ ಬಹಳ ಚಾಲೆಂಜಿಂಗ್ ಆಗಿತ್ತು ಎಂದು ಅವರು ಹೇಳಿದ್ದಾರೆ. ಇನ್ನು ಗುರುಕಿರಣ್ ಗಾಯಕನಾಗಲು ಸ್ಯಾಂಡಲ್​ವುಡ್​​ಗೆ ಕಾಲಿಟ್ಟರು. ಆದರೆ ಆರಂಭದಲ್ಲಿ ಅವರಿಗೆ ಎಲ್ಲಿ ಹೋದರೂ ಆ್ಯಕ್ಟಿಂಗ್​​​​​ ಮಾಡಲು ಅವಕಾಶ ದೊರೆಯುತ್ತಿತ್ತಂತೆ. ಕೊನೆಗೂ ಉಪೇಂದ್ರ ಅಭಿನಯದ 'ಎ' ಚಿತ್ರದ ಮೂಲಕ ಗುರುಕಿರಣ್ ಸಂಗೀತ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು.

'ಎ' ಚಿತ್ರದ ನಂತರ 'ಉಪೇಂದ್ರ' ಹಾಗೂ 'ಚಿತ್ರ' ಸಿನಿಮಾಗಳಿಗೆ ಸಂಗೀತ ನೀರ್ದೇಶನ ಮಾಡಿದರೂ ಅವರಿಗೆ ಹೆಚ್ಚಿನ ಅವಕಾಶ ದೊರೆಯಲಿಲ್ಲ. ಒಂದು ವೇಳೆ 'ಚಿತ್ರ' ಹಿಟ್ ಆಗದಿದ್ದರೆ ಮಂಗಳೂರಿಗೆ ಗಂಟುಮೂಟೆ ಕಟ್ಟಬೇಕು ಎಂದುಕೊಂಡಿದ್ದ ಗುರುಗೆ ಅದೃಷ್ಟ ಖುಲಾಯಿಸಿತು. 'ಚಿತ್ರ' ಸಿನಿಮಾದ ಹಾಡುಗಳು ಸೂಪರ್​​ ಹಿಟ್ ಆಯಿತು. ಜೊತೆಗೆ ಅವರಿಗೆ ಅವಕಾಶಗಳು ಕೂಡಾ ಹುಡುಕಿ ಬಂದವು. ಒಂದು ವೇಳೆ ಗುರುಕಿರಣ್ ಸಂಗೀತ ನೀರ್ದೇಶಕ ಆಗಿಲ್ಲದಿದ್ದರೆ ಮಂಗಳೂರಿನಲ್ಲಿ ಹೋಟೆಲ್ ಉದ್ಯಮ ಮಾಡುತ್ತಿದ್ದರಂತೆ. ಈ ವಿಷಯವನ್ನು ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ 'ಆಯುಷ್ಮಾನ್​ಭವ' ಚಿತ್ರದಿಂದ ಗುರುಕಿರಣ್​​ಗೆ ಬ್ರೇಕ್ ಸಿಕ್ಕಿರುವುದು ನಿಜ. ಕನ್ನಡದ ಟಾಪ್ ಸಂಗೀತ ನಿರ್ದೇಶಕರಲ್ಲ ಗುರುಕಿರಣ್ ಕೂಡಾ ಒಬ್ಬರಾಗಿರುವುದು ವಿಶೇಷ.

ABOUT THE AUTHOR

...view details