ಕರ್ನಾಟಕ

karnataka

ETV Bharat / sitara

ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ. - ಮೊದಲ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ

ತಾರೆಗಳಾದ ಗುರ್ಮೀತ್ ಚೌಧರಿ ಮತ್ತು ಡೆಬಿನಾ ಬೊನ್ನರ್ಜಿ ತಮ್ಮ ಮೊದಲ ಮಗುವನ್ನು ಒಟ್ಟಿಗೆ ಸ್ವಾಗತಿಸಲು ಸಿದ್ಧರಾಗಿದ್ದಾರೆ. 2011ರಲ್ಲಿ ವಿವಾಹವಾದ ದಂಪತಿಗಳು ಇನ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Gurmeet Choudhary, Debina Bonnerjee
ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ ದಂಪತಿ

By

Published : Feb 9, 2022, 3:14 PM IST

ಮುಂಬೈ (ಮಹಾರಾಷ್ಟ್ರ):ನಟ ಗುರ್ಮೀತ್ ಚೌಧರಿ ಮತ್ತು ಡೆಬಿನಾ ಬೊನರ್ಜಿ ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಬುಧವಾರ ಘೋಷಿಸಿದ್ದಾರೆ.

2011 ರಲ್ಲಿ ವಿವಾಹವಾದ ದಂಪತಿ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ತಾವಿಬ್ಬರು ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಟು ಬಿಕಮಿಂಗ್​ 3. ಚೌಧರಿ ಜೂನಿಯರ್ ಕಮಿಂಗ್​. ಸೀಕಿಂಗ್​ ಯುವರ್​ ಬ್ಲೆಸ್ಸಿಂಗ್ಸ್​.# ಪೇರೆಂಟ್ಸ್​ಟೋಬ್​# ಗುರ್ಬಿನಾ, ಎಂದು ಬರೆದುಕೊಂಡಿದ್ದಾರೆ.

ಉದ್ಯಮದ ಹಲವಾರು ಸ್ನೇಹಿತರು, ಮೌನಿ ರಾಯ್, ಕರಿಷ್ಮಾ ಶರ್ಮಾ, ಗೌಹರ್ ಖಾನ್ ಮತ್ತು ಮಹಿ ವಿಜ್ ಸೇರಿದಂತೆ ಇತರರು ಅವರನ್ನು ಅಭಿನಂದಿಸಿದ್ದಾರೆ.

ಖತ್ರೋನ್ ಕೆ ಖಿಲಾಡಿ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚೌಧರಿ ಅವರು ಖಾಮೋಶಿಯಾನ್ ಮತ್ತು ಜೆಪಿ ದತ್ತಾ ಅವರ ಪಲ್ಟನ್‌ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಓದಿ:ಇನ್‍ಲೈನ್ ಸ್ಕೇಟಿಂಗ್‍ನಲ್ಲಿ ಗಿನ್ನೆಸ್‌ ದಾಖಲೆ ಬರೆದ ಹುಬ್ಬಳ್ಳಿಯ ಬಾಲಕಿ


For All Latest Updates

TAGGED:

ABOUT THE AUTHOR

...view details