ಇಂದು ಸ್ಯಾಂಡಲ್ವುಡ್ ಕರಾಟೆ ಕಿಂಗ್ ಶಂಕರ್ನಾಗ್ ಅವರ 65ನೇ ವರ್ಷದ ಹುಟ್ಟುಹಬ್ಬ. ಸಾಮಾನ್ಯ ಅಭಿಮಾನಿಗಳು ಮಾತ್ರವಲ್ಲದೆ, ರಾಜ್ಯಾದ್ಯಂತ ಆಟೋ ಚಾಲಕರು ಕೂಡಾ ಶಂಕರ್ನಾಗ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದರ ಹಾಡುಗಳನ್ನು ಆ ಚಿತ್ರತಂಡ ಶಂಕರ್ನಾಗ್ ಅವರಿಗೆ ಅರ್ಪಿಸಿದೆ.
ತಮ್ಮ ಚಿತ್ರದ ಹಾಡುಗಳನ್ನು ಶಂಕರ್ನಾಗ್ ಅವರಿಗೆ ಅರ್ಪಿಸಿದ ನಿರ್ದೇಶಕ ಶಿವು ಜಮಖಂಡಿ - ಗುಲಾಲ್ ಡಾಟ್ ಕಾಮ್ ಆಡಿಯೋ ಬಿಡುಗಡೆ
'ಗುಲಾಲ್.com' ಚಿತ್ರದ ನಿರ್ದೇಶಕ ಶಿವು ಜಮಖಂಡಿ ಶಂಕರ್ನಾಗ್ ಅವರ ಅಪ್ಪಟ ಅಭಿಮಾನಿ. ಆದ್ದರಿಂದ ತಾವು ನಿರ್ದೇಶನ ಮಾಡಿರುವ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡುವ ಮೂಲಕ ಶಂಕರ್ನಾಗ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ತಬಲಾ ನಾಣಿ ಹಾಗೂ ಬಿಗ್ಬಾಸ್ ಸ್ಪರ್ಧಿ ದಿವಾಕರ್ ಅಭಿನಯದ 'ಗುಲಾಲ್.com' ಚಿತ್ರದ ಹಾಡುಗಳನ್ನು ಶಂಕರ್ನಾಗ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಯಿತು. ಈ ಚಿತ್ರದ ನಿರ್ದೇಶಕ ಶಿವು ಜಮಖಂಡಿ ಶಂಕರ್ನಾಗ್ ಅವರ ಅಪ್ಪಟ ಅಭಿಮಾನಿ. ಆದ್ದರಿಂದ ತಾವು ನಿರ್ದೇಶನ ಮಾಡಿರುವ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡುವ ಮೂಲಕ ಶಂಕರ್ನಾಗ್ಗೆ ಗೌರವ ಸಲ್ಲಿಸಿದ್ದಾರೆ. ತಬಲಾ ನಾಣಿ, ದಿವಾಕರ್, ನೇತ್ರ, ಸೋನು ಪಾಟೀಲ್, ಹಾಸ್ಯ ಕಲಾವಿದರಾದ ಹನುಮಂತು ಸೇರಿ ಚಿತ್ರದ ಬಹುತೇಕ ಎಲ್ಲಾ ಕಲಾವಿದರು ಹಾಡುಗಳ ಬಿಡುಗಡೆ ವೇಳೆ ಹಾಜರಿದ್ದರು.
ಇದೊಂದು ಸಾವು ಬದುಕಿನ ಹೋರಾಟದ ಕಥೆ ಎನ್ನಲಾಗಿದೆ. ತಬಲಾ ನಾಣಿ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರಂತೆ. 'ರೇಸ್' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದ ದಿವಾಕರ್, ಈ ಚಿತ್ರದಲ್ಲಿ ಕಾಮಿಡಿ ಪಾತ್ರದಲ್ಲಿ ನಟಿಸಿದ್ದಾರೆ. ದಿವಾಕರ್ ಅವರಿಗೆ ಜೋಡಿಯಾಗಿ ನೇತ್ರ ನಟಿಸಿದ್ದಾರೆ. ಉಳಿದಂತೆ ಸೋನು ಪಾಟೀಲ್, ಮೋಹನ್ ಜುನೇಜ, ಹಾಸ್ಯ ಕಲಾವಿದರಾದ ಸದಾನಂದ, ಹನುಮಂತ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ 'ನನ್ನ ನಿನ್ನ ಪ್ರೇಮಕಥೆ', 'ಕೃಷ್ಣ ತೀರ' ಸಿನಿಮಾದ ನಂತರ, ಶಿವು ಜಮಖಂಡಿ ಈ ಚಿತ್ರಕ್ಕೆ ಸಂಗೀತದ ಜೊತೆ ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರಕ್ಕೆ ಧನಂಜಯ್ ಹಾಗೂ ಗೋಪಾಲಕೃಷ್ಣ ಹವಾಲ್ದಾರ್ ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಕೂಡಾ ತೆರೆಗೆ ಬರಲಿದೆ.