ಕರ್ನಾಟಕ

karnataka

ETV Bharat / sitara

ಬಿಗ್‌ಬಿ ಜೀವನದಲ್ಲಿ ಇದು ಹೊಸ ಅನುಭವ.. ಅದೇನು, ಅವರೇ ಹೇಳ್ಕೊಂಡಿದ್ದಾರೆ ಇಲ್ಕೇಳಿ.. - ಬಿಗ್​ ಬಿ

ಈ ಸಿನಿಮಾ ಬರೋಬ್ಬರಿ 200 ದೇಶಗಳಲ್ಲಿ ತೆರೆ ಕಂಡಿದೆ. 15 ವಿವಿಧ ಭಾಷೆಗಳ ಸಬ್​​ಟೈಟಲ್​ನಲ್ಲೂ ಸಿನಿಮಾ ವೀಕ್ಷಿಸಬಹುದು. ಈ ಚಿತ್ರಕ್ಕೆ ಶೂಜಿತ್​ ಸಿರ್ಕಾರ್​​ ಆ್ಯಕ್ಷನ್​-ಕಟ್​​ ಹೇಳಿದ್ದಾರೆ..

Gulabo Sitabo makes this happen first time ever in Big B's five decades of career
ಇದು ನನ್ನ ಜೀವನದ ಹೊಸ ಅನುಭವ ಅಂತ ಅಮಿತಾಬ್​ ಹೇಳಿದ್ಯಾಕೆ ಗೊತ್ತಾ?

By

Published : Jun 13, 2020, 6:49 PM IST

ಬಾಲಿವುಡ್​​ ಹಿರಿಯ ನಟ ಅಮಿತಾಬ್​ ಬಚ್ಚನ್​​ ಇಂದು ತಮ್ಮ ಕುಟುಂಸ್ಥರ ಜೊತೆ ಕುಳಿತು ತಾವು ಅಭಿನಯಸಿದ ಗುಲಾಬೋ ಸಿತಾಬೋ ಸಿನಿಮಾ ವೀಕ್ಷಿಸಿದ್ದಾರೆ. ಇದಾದ ನಂತ್ರ ಈ ಅನುಭವವನ್ನು ಹಂಚಿಕೊಂಡಿರುವ ಬಿಗ್​ ಬಿ, ನನ್ನ ಜೀವನದಲ್ಲಿ ಇಂತಹ ಅನುಭವ ಎಂದೂ ಆಗಿರಲಿಲ್ಲ. ಇದು ಅತ್ಯಂತ ಸಂತೋಷದ ಕ್ಷಣ ಎಂದು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಬ್ಲಾಗ್​ನಲ್ಲಿ ಬರೆದಿರುವ ಅಮಿತಾಬ್​​, ಕುಟುಂಬದ ಎಲ್ಲರ ಜೊತೆ ಕುಳಿತು ಸಿನಿಮಾ ನೋಡಿರುವುದು ಅಪಾರ ಸಂತೋಷವನ್ನು ಕೊಟ್ಟಿದೆ. ಈ ಅನುಭವ ನನಗೆ ಹೊಸದು ಎಂದಿದ್ದಾರೆ. ಅಮಿತಾಬ್​ ಅಭಿನಯದ ಗುಲಾಬೋ ಸಿತಾಬೋ ಸಿನಿಮಾ ಅಮೇಜಾನ್​ ಪ್ರೈಂನಲ್ಲಿ ರಿಲೀಸ್​ ಆಗಿದೆ.

ಈ ಸಿನಿಮಾ ಬರೋಬ್ಬರಿ 200 ದೇಶಗಳಲ್ಲಿ ತೆರೆ ಕಂಡಿದ್ದು, 15 ವಿವಿಧ ಭಾಷೆಗಳ ಸಬ್​​ಟೈಟಲ್​ನಲ್ಲೂ ಸಿನಿಮಾ ವೀಕ್ಷಿಸಬಹುದು. ಈ ಚಿತ್ರಕ್ಕೆ ಶೂಜಿತ್​ ಸಿರ್ಕಾರ್​​ ಆ್ಯಕ್ಷನ್​-ಕಟ್​​ ಹೇಳಿದ್ದಾರೆ. ಇದೇ ಶುಕ್ರವಾರ (ನಿನ್ನೆ) ತೆರೆಕಂಡ ಸಿನಿಮಾದಲ್ಲಿ ಆಯಷ್ಮಾನ್​ ಖುರಾನ್​​ ಕೂಡ ಬಣ್ಣ ಹಚ್ಚಿದ್ದಾರೆ.

ABOUT THE AUTHOR

...view details