ನಟಿ ಮಣಿಯರು ಸೀರೆಯಲ್ಲಿ ಅಂದ ಚೆಂದವಾಗಿ ಡ್ಯಾನ್ಸ್ ಮಾಡೋದನ್ನ ನೋಡಿದ್ದೇವೆ. ಆದ್ರೆ ಇತ್ತೀಚೆಗೆ ಕೆಲವು ತಾರೆಯರು ಸೀರೆಯಲ್ಲಿ ಪುಶ್ ಅಪ್ ಮಾಡಲು ಹೊರಟಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಮಂದಿರ ಬೇಡಿ ಸೀರೆಯಲ್ಲಿಯೇ ಪುಶ್ ಅಪ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಆ ವಿಡಿಯೋವನ್ನು ಶೇರ್ ಮಾಡಿದ್ದ ಮಂದಿರ, ಉಡುಗೆ ಯಾವುದಾದರೇನು, ಮಾಡುವ ಕೆಲಸ ಮುಖ್ಯ ಎಂದು ಕ್ಯಾಪ್ಶನ್ ಕೊಟ್ಟಿದ್ದರು.
ಇದೀಗ ಮತ್ತೊಬ್ಬ ನಟಿ ಗುಲ್ ಪನಾಗ್ ಸೀರೆಯುಟ್ಟು ಪುಶ್ ಅಪ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿ, ಯಾವಾಗಾದರೇನು, ಎಲ್ಲಾದರೇನು ಎಂದು ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಟಿ ರಿಶಿನ ಕಂಧರಿ ಕೂಡ ನೀಲಿ ಸೀರೆಯಲ್ಲಿ ವರ್ಕ್ಔಟ್ ಮಾಡಿ ಎಲ್ಲ ಗಮನ ಸೆಳೆದಿದ್ದರು. ಇದೀಗ ಗುಲ್ ಪಾನ್ ಕೂಡ ಈ ಸಾಹಸಕ್ಕೆ ಕೈ ಹಾಕಿದ್ದು, ಸೀರೆಯಲ್ಲಿಯೇ ಪುಶ್ ಅಪ್ ಮಾಡಿದ್ದಾರೆ.