ಕರ್ನಾಟಕ

karnataka

ETV Bharat / sitara

ಅಜ್ಜಿಯ ಬಾಲ್ ಸ್ಟ್ರೈಕಿಂಗ್ ಆಟಕ್ಕೆ ಮನಸೋತ ಕಿಚ್ಚ ಸುದೀಪ್! - sudeep-reacted-news

ಜೀವನದ ಪರಿಪೂರ್ಣತೆ ಎಂದರೆ ಇದು. ಸಂತೋಷ ಎಂದರೆ ಇದು, ಶಕ್ತಿ ಎಂದರೆ ಇದು, ಇದುವೇ ನಮಗೆ ಮಾದರಿ. ಆಕೆಗೆ ಇನ್ನಷ್ಟು ಆಯುರ್ ಆರೋಗ್ಯ ಸಿಗಲಿ..

ಕಿಚ್ಚ ಸುದೀಪ್
ಕಿಚ್ಚ ಸುದೀಪ್

By

Published : May 18, 2021, 7:07 PM IST

ಕನ್ನಡವಲ್ಲದೇ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಡಮ್ ಪಡೆದಿರುವ ನಟ‌ ಕಿಚ್ಚ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಸದಾ ಅಭಿಮಾನಿಗಳ ಪ್ರಶ್ನೆ ಹಾಗೂ ಅವ್ರ ಕಾಮೆಂಟ್‌ಗಳಿಗೆ ಉತ್ತರಿಸುತ್ತಿರುತ್ತಾರೆ.

ಇದೀಗ 60 ರಿಂದ 70 ವಯಸ್ಸಿನ ಅಜ್ಜಿ, ಮಾಲ್‌ನಲ್ಲಿ ಬಾಲ್ ಸ್ಟ್ರೈಕಿಂಗ್ ಆಡುವ ವಿಡಿಯೋವನ್ನು ಅಭಿಮಾನಿಯೊಬ್ಬರು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಅಜ್ಜಿಯ ಆಟದ ವಿಡಿಯೋಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ‌.

ಈ ಇಳಿವಯಸ್ಸಿನಲ್ಲೂ ಅಷ್ಟು ಉತ್ಸಾಹದಲ್ಲಿ ಸೀರೆ ಉಟ್ಟುಕೊಂಡು, ಮಾಸ್ಕ್ ಧರಿಸಿ ಅಜ್ಜಿ ಆಡುವುದನ್ನು ನೋಡಿದ ಕಿಚ್ಚ ಮನ‌‌ ಸೋತಿದ್ದಾರೆ. ಅಷ್ಟೇ ಅಲ್ಲ, ಅಜ್ಜಿಯ ಉತ್ಸಾಹದ ಬಗ್ಗೆ ಅವರು, ಜೀವನದ ಪರಿಪೂರ್ಣತೆ ಎಂದರೆ ಇದು.

ಸಂತೋಷ ಎಂದರೆ ಇದು, ಶಕ್ತಿ ಎಂದರೆ ಇದು, ಇದುವೇ ನಮಗೆ ಮಾದರಿ. ಆಕೆಗೆ ಇನ್ನಷ್ಟು ಆಯುರ್ ಆರೋಗ್ಯ ಸಿಗಲಿ ಎಂದು ಸುದೀಪ್ ಆ ಅಜ್ಜಿಗೆ ಮನಃ ಪೂರ್ವಕವಾಗಿ ಹಾರೈಸಿದ್ದಾರೆ.

ABOUT THE AUTHOR

...view details