ಕರ್ನಾಟಕ

karnataka

ETV Bharat / sitara

ಹೊಸ ತಂತ್ರಜ್ಞಾನದೊಂದಿಗೆ 'ನಿಷ್ಕರ್ಷ' ಮರು ಬಿಡುಗಡೆ...ಚಿತ್ರಕ್ಕೆ ಸಿಕ್ತು ಭರ್ಜರಿ ಓಪನಿಂಗ್​​ - ಅನಂತ್ ನಾಗ್

1993 ರಲ್ಲಿ ಬಿಡುಗಡೆಯಾಗಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ನಿಷ್ಕರ್ಷ' ಇಂದು ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗಿದ್ದು ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಅಭಿನಯ ಭಾರ್ಗವನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನಿಮಾ ವೀಕ್ಷಿಸಿದ್ದಾರೆ.

ನಿಷ್ಕರ್ಷ

By

Published : Sep 20, 2019, 7:34 PM IST

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ನಿಷ್ಕರ್ಷ' ಬರೋಬ್ಬರಿ 25 ವರ್ಷಗಳ ನಂತರ ಹೊಸ ತಂತ್ರಜ್ಞಾನದೊಂದಿಗೆ ಇಂದು ಮತ್ತೆ ಬಿಡುಗಡೆಯಾಗಿದೆ. ವಿಷ್ಣುದಾದ ಅವರ 59ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಆಧುನಿಕ ತಂತ್ರಜ್ಞಾನದೊಂದಿಗೆ ಇಂದು ಚಿತ್ರವನ್ನು ಮರುಬಿಡುಗಡೆ ಮಾಡಲಾಗಿತ್ತು.

ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾದ 'ನಿಷ್ಕರ್ಷ'

1993 ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗ ಮತ್ತೆ ಭರ್ಜರಿ ಓಪನಿಂಗ್ ಸಿಕ್ಕಿದೆ‌. ಕೆ.ಜಿ. ರಸ್ತೆಯ ಅನುಪಮ ಚಿತ್ರಮಂದಿರದಲ್ಲಿ 'ನಿಷ್ಕರ್ಷ' ಮರುಬಿಡುಗಡೆ ಆಗಿದ್ದು, ವಿಷ್ಣು ಫ್ಯಾನ್ಸ್ ಬಹಳ ಹುಮ್ಮಸ್ಸಿನಿಂದಲೇ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ. ಅಲ್ಲದೆ ಥಿಯೇಟರ್​​ನಲ್ಲಿ ವಿಷ್ಣುವರ್ಧನ್ ಅವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ವಿಷ್ಣು ಅವರ ಯಾವುದೇ ಸಿನಿಮಾ ಬಿಡುಗಡೆಯಾಗಲಿ ನಾವು ನೋಡಲು ಮುಂದೆ ಬರುತ್ತೇವೆ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದರು. ಸಸ್ಪೆನ್ಸ್ ಚಿತ್ರಗಳ ಕಿಂಗ್ ಎಂದೇ ಹೆಸರಾಗಿರುವ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಈ ಸಿನಿಮಾದ ನಿರ್ದೇಶಕರು. ಸುಮಾರು 66 ಲಕ್ಷ ರೂಪಾಯಿ ಖರ್ಚು ಮಾಡಿ ಬಿ.ಸಿ. ಪಾಟೀಲ್ ಚಿತ್ರವನ್ನು ನಿರ್ಮಿಸಿದ್ದರು. ಈಗ ಮತ್ತೆ ಆಧುನಿಕ ಸ್ಪರ್ಶ ನೀಡಲು ಚಿತ್ರಕ್ಕಾಗಿ 1 ಕೋಟಿ ರೂಪಾಯಿ ಖರ್ಚು ಮಾಡಿದ್ದು ಸೃಷ್ಟಿ ಫಿಲಂ ಬ್ಯಾನರ್ ಮೂಲಕ ಚಿತ್ರ ಬಿಡುಗಡೆಯಾಗಿದೆ. ಅನಂತ್ ನಾಗ್, ರಮೇಶ್ ಭಟ್ , ಪ್ರಕಾಶ್ ರಾಜ್, ಬಿ.ಸಿ. ಪಾಟೀಲ್, ಸುಮನ್ ನಗರ್​​​​ಕರ್​​​​​​​ ಹಾಗೂ ಗುರುಕಿರಣ್ ಬಹುತೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ABOUT THE AUTHOR

...view details