ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಮಹರ್ಷಿ‘ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದು ಮಹೇಶ್ ಅಭಿನಯದ 25ನೇ ಸಿನಿಮಾವಾಗಿರುವುದರಿಂದ ಅಭಿಮಾನಿಗಳಿಗೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
‘ಮಹರ್ಷಿ‘ ಆಗಮನಕ್ಕೆ ಮುಹೂರ್ತ ಫಿಕ್ಸ್: ಪ್ರಮೋಷನ್ ಕೆಲಸದಲ್ಲಿ ಚಿತ್ರತಂಡ - undefined
ಮಹೇಶ್ಬಾಬು ಹಾಗೂ ಪೂಜಾಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಮಹರ್ಷಿ‘ ಸಿನಿಮಾ ಮೇ 9 ರಂದು ಬಿಡುಗಡೆಯಾಗುತ್ತಿದ್ದು ಚಿತ್ರತಂಡ ಮೇ 1 ರಂದು ಹೈದರಾಬಾದ್ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಏರ್ಪಡಿಸಿದೆ.
ವಂಶಿ ಪೈಡಿಪಲ್ಲಿ ಈ ಸಿನಿಮಾವನ್ನು ನಿರ್ದೇಶಿಸಿದ್ದು ದಿಲ್ರಾಜು ಹಾಗೂ ಪಿವಿಪಿ ಪ್ರೊಡಕ್ಷನ್ ಹಾಗೂ ಅಶ್ವಿನ್ ದತ್ ಜೊತೆ ಸೇರಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಇಂಟರ್ನೆಟ್ನಲ್ಲಿ ಹಲ್ಚಲ್ ಎಬ್ಬಿಸಿದೆ. ಇನ್ನು ಮಹೇಶ್ಗೆ ನಾಯಕಿಯಾಗಿ ಪೂಜಾಹೆಗ್ಡೆ ನಟಿಸಿದ್ದಾರೆ. ಅಲ್ಲರಿ ನರೇಶ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಚಿತ್ರತಂಡ ಸದ್ಯಕ್ಕೆ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಿದ್ದು ಮೇ 1ಕ್ಕೆ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಏರ್ಪಡಿಸಿದೆ. ಹೈದರಾಬಾದ್ ನೆಕ್ಲೆಸ್ ರೋಡ್ನ ಪೀಪಲ್ ಪ್ಲಾಜಾದಲ್ಲಿ ಅಂದು ಕಾರ್ಯಕ್ರಮ ಜರುಗಲಿದ್ದು ಅದೇ ದಿನ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಲಿದೆ. ಮೇ 9 ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.