ಬಾಲಿವುಡ್ ತಾರೆಯರು ಅಂದ್ರೆ ಹಾಗೆ. ಅರೆ ಬರೆ ಬಟ್ಟೆ ಹಾಕ್ಕೊಂಡು ಕ್ಯಾಮರಾಗೆ ಪೋಸ್ ಕೊಡೋದೆ ಅವರ ಫ್ಯಾಷನ್ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅದ್ರಲ್ಲು ಕೆಲವು ನಟಿಯರು ಹಾಕುವ ಬಟ್ಟೆಗಳು ವಿವಾದಕ್ಕೆ ಮತ್ತು ಚರ್ಚೆಗೆ ಗ್ರಾಸವಾಗುತ್ತವೆ. ಇದೀಗ ಪ್ರಿಯಾಂಕ ಚೋಪ್ರಾ ಕಥೆಯೂ ಅದೇ ಆಗಿದೆ.
ತುಂಡುಡುಗೆಯಲ್ಲಿ ಮಿಂಚಿದ ಚೋಪ್ರಾ: ಪಡ್ಡೆ ಹುಡುಗರ ನಿದ್ದೆಗೆಡಿಸಿತು ಪ್ರಿಯಾಂಕಳ ಈ ಫೋಟೋ! - ಪ್ರಿಯಾಂಕ ಚೋಪ್ರ
ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಗ್ರಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧರಿಸಿದ್ದ ಉಡುಪು ಪಡ್ಡೆಹೈಕ್ಳ ಹುಬ್ಬೇರುವಂತೆ ಮಾಡಿದೆ.
ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಗ್ರಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪೊಂದನ್ನು ಧರಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಎದೆಯ ಅರ್ಧಭಾಗ ಕಾಣುವಂತಿದೆ ಬಟ್ಟೆ ಧರಿಸಿರುವ ಪ್ರಿಯಾಂಕ ಸ್ಟೈಲ್ ನೋಡಿದ ನೆಟ್ಟಿಗರು, ಈ ಹಿಂದೆ ಅಂದ್ರೆ 2000 ಇಸವಿಯಲ್ಲಿ ನಡೆದಿದ್ದ ಗ್ರಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಇದೇ ರೀತಿಯ ಡ್ರೆಸ್ ಅನ್ನು ಜನಿಫರ್ ಲೋಪೆಸ್ ಧರಿಸಿದ್ರು ಅಂತ ಕಮೆಂಟ್ ಮಾಡ್ತಿದ್ದಾರೆ.
ಪ್ರಿಯಾಂಕ ಕೂಡ ಹೆಚ್ಚು ಕಮ್ಮಿ ಅದೇ ರೀತಿಯ ಬಟ್ಟೆ ತೊಟ್ಟಿದ್ದು, ನೆಟ್ಟಿಗರು ಕಂಮೆಂಟ್ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಕೆಲವರು ನೈಸ್ ಡ್ರೆಸ್ ಅಂದ್ರೆ, ಕೆಲವರು ಇನ್ನೂ ಏನೋ ಬೇಕಾಗಿತ್ತು ಅಂತಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಪ್ರಿಯಾಂಕ ಜೊತೆ ಪತಿ ನಿಕ್ ಜೋನಸ್ ಕೂಡ ಭಾಗಿಯಾಗಿದ್ರು. ಆದ್ರೆ ಪ್ರಿಯಾಂಕ ಫೋಟೊ ಯುವಕರನ್ನು ಒಂದು ಕ್ಷಣ ತನ್ನತ್ತ ಸೆಳೆಯುವುದಂತೂ ನಿಜ.