ಕರ್ನಾಟಕ

karnataka

ETV Bharat / sitara

ವಿನಯ್ ರಾಜ್​​ಕುಮಾರ್​​​​ಗಿಂದು ಬರ್ತಡೇ ಸಂಭ್ರಮ..ಗಿಫ್ಟ್ ಆಗಿ 'ಗ್ರಾಮಾಯಣ' ಟೀಸರ್ ಬಿಡುಗಡೆ - Gramayana teaser released

ಡಾ. ರಾಜ್​​​ಕುಮಾರ್ ಮೊಮ್ಮಗ ವಿನಯ್ ರಾಜ್​​ಕುಮಾರ್​​​ಗೆ ಇಂದು 30 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 'ಗ್ರಾಮಾಯಣ' ಚಿತ್ರತಂಡ ಇಂದು ಸರ್ಪೈಸ್ ಗಿಫ್ಟ್​​ ಆಗಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

Vinay Rajkumar
ವಿನಯ್ ರಾಜ್​ಕುಮಾರ್​

By

Published : May 7, 2020, 6:27 PM IST

'ಸಿದ್ದಾರ್ಥ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿನಯ್​ ರಾಜ್​ಕುಮಾರ್​​​​ ನಂತರ 'ರನ್ ಆಂಟೋನಿ' ಹಾಗೂ 'ಅನಂತು ವರ್ಸಸ್ ನುಸ್ರತ್' ಆಗಿ ಮಿಂಚಿದರು. ಅಣ್ಣಾವ್ರ ಕುಟುಂಬದ ಈ ಕುಡಿಗೆ ಇಂದು 30ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

ವಿನಯ್ ರಾಜ್​ಕುಮಾರ್

ಪ್ರತಿ ವರ್ಷ ತಮ್ಮ‌ ಕುಟುಂಬ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿದ್ದ ವಿನಯ್ ರಾಜ್​​ಕುಮಾರ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಕೊರೊನಾ ಎಫೆಕ್ಟ್​​​​​​​​​​​​​​​​​​​ನಿಂದಾಗಿ ಇಡೀ ದೇಶವೇ ಸಂಕಷ್ಟದಲ್ಲಿರುವಾಗ ಹೇಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಎಂದು ಸುಮ್ಮನಾಗಿದ್ದಾರೆ ವಿನಯ್. ಆದ್ದರಿಂದ 'ಗ್ರಾಮಾಯಣ' ಚಿತ್ರತಂಡ ಇಂದು ವಿನಯ್ ಬರ್ತಡೇಗಾಗಿ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ.

ಈ ಚಿತ್ರದಲ್ಲಿ ವಿನಯ್ ರಾಜ್​​​​​​​​​​​​​​​ಕುಮಾರ್ ಉದ್ದ ಕೂದಲು ಹಾಗೂ ಗಡ್ಡ ಬಿಟ್ಟು ರಗಡ್ ಲುಕ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್​​​​ನಲ್ಲಿ ಪಂಚಿಂಗ್​ ಡೈಲಾಗ್ ಕೂಡಾ ಚೆನ್ನಾಗಿದೆ. ವಿನಯ್ ರಾಜ್​​​ಕುಮಾರ್​​​​​​​​​ ರಾ ಸ್ಟೈಲ್​​​ನಲ್ಲಿ ಬೊಂಬಾಟ್ ಫೈಟ್ ಮಾಡಿದ್ದಾರೆ. ಅಮೃತಾ ಅಯ್ಯರ್ ವಿನಯ್ ರಾಜ್​​​​​​​​​ಕುಮಾರ್​​​​​​ಗೆ ಜೋಡಿಯಾಗಿದ್ದಾರೆ. ದೇವನೂರು ಚಂದ್ರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ 'ಗ್ರಾಮಾಯಣ' ಈ ಕೊರೊನಾ ಹಾವಳಿ ಮುಗಿದ ನಂತರ ತೆರೆಗೆ ಬರಲು ಸಜ್ಜಾಗಿದೆ.

ವಿನಯ್ ರಾಜ್​ಕುಮಾರ್

ABOUT THE AUTHOR

...view details