ಬೆಂಗಳೂರು :ಕೊರೊನಾದಿಂದಾಗಿ ಸತತ ಏಳು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಅಕ್ಟೋಬರ್ 15ರಿಂದ ಓಪನ್ ಆಗುತ್ತಿವೆ. ಸಿನಿಮಾ ಮಂದಿರಗಳ ಆರಂಭಕ್ಕೆ ಕೇಂದ್ರ ಸರ್ಕಾರ ಕೆಲ ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳ ಅನ್ವಯ ಚಿತ್ರಮಂದಿರಗಳು ದೇಶಾದ್ಯಂತ ತೆರೆಯಲಿವೆ.
ಚಿತ್ರ ಮಂದಿರಗಳ ಪುನಾರಂಭಕ್ಕೆ ಕೇಂದ್ರದ ಗ್ರೀನ್ ಸಿಗ್ನಲ್.. ಫಿಲ್ಮ್ ಚೇಂಬರ್ ಅಧ್ಯಕ್ಷರು ಹೇಳಿದ್ದೇನು?
ಯಾವೆಲ್ಲ ಹೊಸ ಸಿನಿಮಾಗಳು ರಿಲೀಸ್ ಆಗುತ್ತೆ ಅನ್ನೋದು ಇನ್ನೂ ಎರಡ್ಮೂರು ದಿನದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತೆ. ಜೊತೆಗೆ ಚಿತ್ರಮಂದಿರಗಳು ಆರಂಭವಾದಾಗ ವ್ಯಾಪಾರ ಕೂಡ ಶುರುವಾಗುತ್ತೆ. ಇಲ್ಲಿ ಸ್ಟಾರ್ ನಟರ ಸಿನಿಮಾ, ಹೊಸಬರ ಸಿನಿಮಾ ಅನ್ನೋ ಲೆಕ್ಕ ಬರೋಲ್ಲ..
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜಯರಾಜ್, ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನ ಎಲ್ಲಾ ಚಿತ್ರಮಂದಿರ ಮಾಲೀಕರು, ವಿತರಕರು, ನಿರ್ಮಾಪಕರು ಅನುಸರಿಸುವಂತೆ ಹೇಳಲಾಗಿದೆ. ಹಾಗೂ ಮೊದಲು ಹಳೆಯ ಸಿನಿಮಾಗಳ ರಿಲೀಸ್ಗೆ ಅವಕಾಶ ನೀಡಲಾಗಿದೆ.
ಇದ್ರ ಜೊತೆಗೆ ಯಾವೆಲ್ಲ ಹೊಸ ಸಿನಿಮಾಗಳು ರಿಲೀಸ್ ಆಗುತ್ತೆ ಅನ್ನೋದು ಇನ್ನೂ ಎರಡ್ಮೂರು ದಿನದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತೆ. ಜೊತೆಗೆ ಚಿತ್ರಮಂದಿರಗಳು ಆರಂಭವಾದಾಗ ವ್ಯಾಪಾರ ಕೂಡ ಶುರುವಾಗುತ್ತೆ. ಇಲ್ಲಿ ಸ್ಟಾರ್ ನಟರ ಸಿನಿಮಾ, ಹೊಸಬರ ಸಿನಿಮಾ ಅನ್ನೋ ಲೆಕ್ಕ ಬರೋಲ್ಲ. ಸರ್ಕಾರದ ಮಾರ್ಗಸೂಚಿಗಳನ್ನ ಪ್ರತಿಯೊಬ್ಬರು ಪಾಲಿಸಬೇಕು ಎಂದು ಜಯರಾಜ್ ತಿಳಿಸಿದ್ದಾರೆ.