ಸಿನಿಮಾ ಒಳಾಂಗಣ ಕೆಲಸಕ್ಕೆ ಅನುಮತಿ ಕೊಟ್ಟ ಹಿನ್ನೆಲೆ, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್,ಹಾಗೂ ವಾಣಿಜ್ಯ ಮಂಡಳಿ ಸಿಬ್ಬಂದಿ ಇಂದು ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಸಿನಿಮಾ ಒಳಾಂಗಣ ಕೆಲಸಕ್ಕೆ ಸರ್ಕಾರದ ಅನುಮತಿ: ಆರ್ ಅಶೋಕ್ಗೆ ಧನ್ಯವಾದ ಸಲ್ಲಿಸಿದ ಚಿತ್ರೋದ್ಯಮ - ದಾರವಾಹಿ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ
ಧಾರಾವಾಹಿ ಒಳಾಂಗಣ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೆ ಸಿನಿಮಾ ಕೆಲಸಕ್ಕೂ ಅನುಮತಿ ನೀಡುವಂತೆ ಕಳೆದ 4 ದಿನಗಳ ಹಿಂದೆ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಚಿತ್ರರಂಗದ ಮನವಿ ಪರಿಗಣಿಸಿರುವ ಸರ್ಕಾರ ಸಿನಿಮಾದ ಒಳಾಗಂಣ ಕೆಲಸಕ್ಕೆ ಅಸ್ತು ಎಂದಿದಕ್ಕೆ, ನಿರ್ಮಾಪಕರ ಸಂಘ ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಇಂದು ಸಚಿವ ಆರ್ ಆಶೋಕ್ ಭೇಟಿಯಾಗಿ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.
![ಸಿನಿಮಾ ಒಳಾಂಗಣ ಕೆಲಸಕ್ಕೆ ಸರ್ಕಾರದ ಅನುಮತಿ: ಆರ್ ಅಶೋಕ್ಗೆ ಧನ್ಯವಾದ ಸಲ್ಲಿಸಿದ ಚಿತ್ರೋದ್ಯಮ Government Gave permission to cinema interior work](https://etvbharatimages.akamaized.net/etvbharat/prod-images/768-512-7137989-1039-7137989-1589098464900.jpg)
ಧಾರಾವಾಹಿ ಒಳಾಂಗಣ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೆ ಸಿನಿಮಾ ಕೆಲಸಕ್ಕೂ ಅನುಮತಿ ನೀಡುವಂತೆ ಕಳೆದ 4 ದಿನಗಳ ಹಿಂದೆ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಚಿತ್ರರಂಗದ ಮನವಿ ಪರಿಗಣಿಸಿರುವ ಸರ್ಕಾರ ಸಿನಿಮಾದ ಒಳಾಗಂಣ ಕೆಲಸಕ್ಕೆ ಅಸ್ತು ಎಂದಿದಕ್ಕೆ, ನಿರ್ಮಾಪಕರ ಸಂಘ ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಇಂದು ಸಚಿವ ಆರ್ ಆಶೋಕ್ ಭೇಟಿಯಾಗಿ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಸಚಿವರು, ಶೂಟಿಂಗ್ ಬೇಡ, ಬದಲಿಗೆ ಪೋಸ್ಟ್ ಪ್ರೊಡಕ್ಷನ್, ಪ್ರೀ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ ನೀಡಲಾಗಿದೆ. ಎಡಿಟಿಂಗ್,ಮಿಕ್ಸಿಂಗ್, ಗ್ರಾಫಿಕ್ಸ್ ಈ ರೀತಿಯ ಕೆಲಸ ಮಾಡಿಕೊಳ್ಳಬಹುದು. ಚಿತ್ರೀಕರಣ ಹೊರತುಪಡಿಸಿ ಎಲ್ಲಾ ಕೆಲಸಗಳನ್ನ ಮಾಡಬಹುದು ಎಂದರು.