ಹೊಂಬಾಳೆ ಫಿಲಂಸ್ ಇಂದು ಮಧ್ಯಾಹ್ನ ಹೊಸ ಚಿತ್ರವೊಂದನ್ನು ಘೋಷಿಸುವುದಾಗಿ ಹೇಳಿದೆ. ಹೀಗಾಗಿ, ಆ ಚಿತ್ರ ಯಾವುದಿರಬಹುದು? ಚಿತ್ರದಲ್ಲಿ ಯಾರೆಲ್ಲಾ ನಟಿಸಬಹುದು? ಎಂಬೆಲ್ಲಾ ಕುತೂಹಲಕಾರಿ ವಿಷಯದ ಕುರಿತಾಗಿ ಸಿನಿಮಾಸಕ್ತರು ಚರ್ಚಿಸುವಂತಾಗಿದೆ. ಚಿತ್ರ ಯಾವುದು ಮತ್ತು ಯಾರು ನಟಿಸಬಹುದು ಎಂಬೆಲ್ಲಾ ವಿಷಯ ಇಂದು ಮಧ್ಯಾಹ್ನ ಬಹಿರಂಗವಾಗುತ್ತದೆಯಾದರೂ, ಈ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೂಡಾ ಎದ್ದಿವೆ.
ತೆಲುಗುಗೆ ರಿಮೇಕ್ ಆಗುತ್ತಾ 'ಉಗ್ರಂ' ಸಿನಿಮಾ? - ಪ್ರಭಾಸ್
ಪ್ರಶಾಂತ್ ನೀಲ್ 'ಉಗ್ರಂ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಟ ಮುರಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಚಿತ್ರ ತೆಲುಗುಗೆ ರಿಮೇಕ್ ಆಗುತ್ತೆ ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ, ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಾರೆ ಮತ್ತು ಟಾಲಿವುಡ್ ನಟ ಪ್ರಭಾಸ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಕೆಲವು ದಿನಗಳ ಹಿಂದೆ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಇಬ್ಬರೂ ಹೈದರಾಬಾದ್‍ನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದರಂತೆ. ಈ ವಿಷಯ ಅದು ಹೇಗೋ ಸೋರಿಕೆ ಆಗಿದೆ. ಅವರಿಬ್ಬರೂ ಜೊತೆಯಾಗಿ ಕೆಲಸ ಮಾಡುವುದಕ್ಕೆ ಸಜ್ಜಾಗಿರುವುದಷ್ಟೇ ಅಲ್ಲ, ಆ ಚಿತ್ರವನ್ನೇ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ ಎಂಬ ವಿಷಯ ಕಳೆದೆರೆಡು ದಿನಗಳಿಂದ ಕೇಳಿಬರುತ್ತಿದೆ.
ಓದಿ: ಹರಿಕಥೆ ಅಲ್ಲಾ... ಗಿರಿಕಥೆಯಿಂದ ಹೊರ ಬಂದ ಗಿರಿಕೃಷ್ಣ
ಈಗ ಕೇಳಿಬರುತ್ತಿರುವ ಇನ್ನೊಂದು ಹೊಸ ಸುದ್ದಿಯೇನೆಂದರೆ, ಆ ಚಿತ್ರವು ಕನ್ನಡದ `ಉಗ್ರಂ'ನ ರಿಮೇಕ್ ಅನ್ನೋದು. ಪ್ರಶಾಂತ್ ನೀಲ್, ಇದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಟ ಮುರಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಹೆಚ್ಚು ಬಜೆಟ್ ಅಥವಾ ದೊಡ್ಡ ಮೇಕಿಂಗ್‍ನ ಅವಶ್ಯಕತೆ ಇಲ್ಲ. ಹಾಗಾಗಿ ಕೆಲವೇ ತಿಂಗಳ ಅಂತರದಲ್ಲಿ ಈ ಚಿತ್ರವನ್ನು ಮಾಡಿ ಮುಗಿಸಬಹುದಾಗಿದ್ದರಿಂದ, ಈ ಚಿತ್ರವನ್ನು ಪ್ರಶಾಂತ್ ಕೈಗೆತ್ತಿಕೊಳ್ಳಲಿದ್ದಾರೆ. ಜೊತೆಗೆ ಪ್ರಭಾಸ್ ಚಿತ್ರದಲ್ಲಿ ನಟಿಸುವುದಕ್ಕೆ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.