ಕರ್ನಾಟಕ

karnataka

ETV Bharat / sitara

ಸಲಗನಿಗೆ ಸಿಕ್ತು ಹಿರಿಯ ನಟ ದತ್ತಣ್ಣ, ಎಸ್.ನಾರಾಯಣ್​ ಹಾರೈಕೆ - ನಟ ದತ್ತಣ್ಣ

ಹಿರಿಯ ನಟ ದತ್ತಣ್ಣ ಹಾಗೂ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಸಲಗ ಮತ್ತು ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆ ಮಾತುಗಳನ್ನ ಆಡಿದ್ದಾರೆ.

ಸಲಗನಿಗೆ ಸಿಕ್ತು ಹಿರಿಯ ನಟ ದತ್ತಣ್ಣ ಹಾಗು ಎಸ್.ನಾರಾಯಣ್​ರ ಹಾರೈಕೆ
ಸಲಗನಿಗೆ ಸಿಕ್ತು ಹಿರಿಯ ನಟ ದತ್ತಣ್ಣ ಹಾಗು ಎಸ್.ನಾರಾಯಣ್​ರ ಹಾರೈಕೆ

By

Published : Oct 13, 2021, 9:25 PM IST

Updated : Oct 13, 2021, 10:07 PM IST

ಸಲಗ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ , ಟ್ರೇಲರ್ ಹಾಗೂ ಹಾಡುಗಳಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಚಿತ್ರ. ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನದ ಜೊತೆಗೆ ಅಭಿನಯ ಮಾಡಿರುವ ಸಲಗ ಬಿಡುಗಡೆಗೆ, ಕೆಲವೇ ಗಂಟೆಗಳು ಬಾಕಿ ಇದೆ. ನಾಳೆ ರಾಜ್ಯಾದ್ಯಂತ 300 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

ಸಲಗನಿಗೆ ಸಿಕ್ತು ಹಿರಿಯ ನಟ ದತ್ತಣ್ಣ, ಎಸ್.ನಾರಾಯಣ್​ ಹಾರೈಕೆ

ಸದ್ಯ ಈ ಸಿನಿಮಾ ಭಜನೆ ಮಾಡ್ತಾ ಇರೋ ದುನಿಯಾ ವಿಜಯ್, ಈ ಸಿನಿಮಾ ಯಶಸ್ಸಿಗಾಗಿ ಸಾಕಷ್ಟು ದೇವರ ಮೊರೆ ಹೋಗಿದ್ದಾರೆ‌. ಸದ್ಯ ಕೊರೊನಾ ಎರಡನೇ ಅಲೆ ಬಳಿಕ, ಚಿತ್ರಮಂದಿರಗಳಲ್ಲಿ ಎರಡು ಬಿಗ್ ಸ್ಟಾರ್ ಗಳಾದ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ಬಿಡುಗಡೆ ಆಗುತ್ತಿದೆ. ಹೀಗಾಗಿ ಸ್ಯಾಂಡಲ್ ವುಡ್ ನಲ್ಲಿ ಸಲಗ ಸಿನಿಮಾ ಮೇಲೆ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಹಿರಿಯ ನಟ ದತ್ತಣ್ಣ ಹಾಗು ಹಿರಿಯ ನಿರ್ದೇಶಕ ಎಸ್. ನಾರಾಯಣ್ ಸಲಗ ಹಾಗೂ ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆ ಮಾತುಗಳನ್ನ ಆಡಿದ್ದಾರೆ. ದತ್ತಣ್ಣ ಮಾತನಾಡಿ, ಸಲಗ ಸಿನಿಮಾ ಬರ್ತಾ ಇದೆ, ಪ್ರೇಕ್ಷಕರು ಸಿನಿಮಾ ನೋಡಿ, ಹಾಗೇ ಸಲಗ ಸಿನಿಮಾ ಚೆನ್ನಾಗಿ ಇದೆ ಅಂತಾ ಕೇಳಿದೆ, ಈ ಸಿನಿಮಾಗೆ ಯಶಸ್ಸು ಸಿಗಲಿ ಅಂತಾ ಹಾರೈಯಿಸಿದ್ದಾರೆ.

ಇನ್ನು ಹಿರಿಯ ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ ದುನಿಯಾ ವಿಜಯ್ ನಟನೆ, ಜೊತೆಗೆ ನಿರ್ದೇಶಕನಾಗುತ್ತಿರೋದು ಖುಷಿಯ ವಿಚಾರ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನ‌ ನಟರು, ನಿರ್ದೇಶನ ಮಾಡಿ ಸಕ್ಸಸ್ ಕಂಡಿದ್ದಾರೆ. ಅದರಂತೆ ವಿಜಯ್​ಗೂ ಯಶಸ್ಸು ಸಿಗಲಿ ಅಂತಾ ಹಾರೈಯಿಸಿದ್ದಾರೆ.

Last Updated : Oct 13, 2021, 10:07 PM IST

ABOUT THE AUTHOR

...view details