ಲವ್ಲಿ ಸ್ಟಾರ್ ಪ್ರೇಮ್ (Lovely Star Prem), ಬೃಂದಾ ಆಚಾರ್ಯ (Brinda Acharya), ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿ ಕಾಣಿಸಿರುವ ‘ಪ್ರೇಮಂ ಪೂಜ್ಯಂ’ (Premam Poojyam) ಚಿತ್ರ ಬಿಡುಗಡೆಯಾಗಿಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
ಇಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಪ್ರೇಮಂ ಪೂಜ್ಯಂ' (Premam Poojyam) ಸಿನಿಮಾ ಬಿಡುಗಡೆ ಆಗಿದೆ. ನಟ ಶರಣ್, ಚಂದ್ರಮುಖಿ ಪ್ರಾಣಸಖಿ ಭಾವನಾ, ನಿರ್ದೇಶಕ ತರುಣ್ ಸುಧೀರ್, ನಟಿ ಕಾರುಣ್ಯಾ ರಾಮ್ , ಹಾಸ್ಯ ಕಲಾವಿದರಾದ ಶಿವರಾಜ್ ಕೆ. ಆರ್ ಪೇಟೆ, ಜಿ ಗೋವಿಂದರಾಜು, ಧರ್ಮಣ್ಣ, ನಟಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ, ನಿರ್ದೇಶಕ ಮಹೇಶ್ ಕುಮಾರ್ ಸೇರಿ ಸಾಕಷ್ಟು ಸಿನಿಮಾ ತಾರೆಯರು ಈ ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ.
ಸಿನಿಮಾ ನೋಡಿದ ಬಳಿಕ ಅಭಿಪ್ರಾಯ ಹಂಚಿಕೊಂಡ ನಟ ಶರಣ್ ಹಾಗೂ ನಿರ್ದೇಶಕ ತರುಣ್ ಸುಧೀರ್, ಗೆಳೆಯ ಪ್ರೇಮ್ ಮತ್ತು ವೈದ್ಯನ ಪಾತ್ರದ ಮೇಕ್ ಓವರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗಕ್ಕೆ ಇಂತಹ ಸಿನಿಮಾಗಳು ಬೇಕು.
ಇದು ಪ್ರೇಮ್ ಅವರ 25ನೇ ಚಿತ್ರವಾಗಿದೆ. ಮುದ್ದಾದ ಲವ್ ಸ್ಟೋರಿ ಜೊತೆಗೆ ಟೆಕ್ನಿಕಲ್ ಸಿನಿಮಾ. ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಜೊತೆಗೆ ಕ್ಯಾಮೆರಾಮ್ಯಾನ್ ನವೀನ್ ಕುಮಾರ್ ಕೂಡ ಈ ಚಿತ್ರದ ಹೀರೊ ಅಂತಾ ಕೊಂಡಾಡಿದರು.