ಕರ್ನಾಟಕ

karnataka

ETV Bharat / sitara

ಯಶ್ ಫ್ಯಾನ್ಸ್​​ಗೆ ಗುಡ್ ನ್ಯೂಸ್​​​...ಕೆಜಿಎಫ್​​​​​-2 ಬಗ್ಗೆ ಹೊಸ ವಿಚಾರ ರಿವೀಲ್ ಮಾಡಿದ ಚಿತ್ರತಂಡ - KGF chapter 2 teaser for Yash Birthday

ಮುಂದಿನ ವರ್ಷ ಜನವರಿ 8 ರಂದು ಯಶ್ ಹುಟ್ಟುಹಬ್ಬದ ವಿಶೇಷವಾಗಿ ಅಂದು ಬೆಳಗ್ಗೆ 10.18ಕ್ಕೆ ಕೆಜಿಎಫ್​ ಚಾಪ್ಟರ್ 2 ಚಿತ್ರತಂಡ ಟೀಸರ್ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಘೋಷಿಸಿದ್ದು ಸಿನಿಪ್ರಿಯರು ಟೀಸರ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

KGF 2 teaser
ಕೆಜಿಎಫ್​​​​​-2 ಟೀಸರ್

By

Published : Dec 21, 2020, 10:31 AM IST

Updated : Dec 21, 2020, 10:36 AM IST

ಡಿಸೆಂಬರ್ 21 ರಂದು ಬೆಳಗ್ಗೆ 10.08 ಕ್ಕೆ ಕೆಜಿಎಫ್ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ವಿಚಾರವನ್ನು ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್​​ ಚಿತ್ರತಂಡ ಕೊನೆಗೂ ಹೊಸ ವಿಚಾರವೊಂದನ್ನು ರಿವೀಲ್ ಮಾಡಿದ್ದು ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

21 ಡಿಸೆಂಬರ್ 2018 ರಂದು ಕೆಜಿಎಫ್ ಭಾಗ 1 ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾದ ದಿನದಂದೇ ಚಿತ್ರತಂಡ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ದಿನಾಂಕ ಹಾಗೂ ಸಮಯವನ್ನು ಅನೌನ್ಸ್ ಮಾಡಿದೆ. ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಕೆಜಿಎಫ್​​ ಸೀಕ್ವೆಲ್ ಟೀಸರ್ 2021 ಜನವರಿ 8 ಯಶ್ ಹುಟ್ಟುಹಬ್ಬದ ದಿನದಂದು ಬೆಳಗ್ಗೆ 10.18 ಕ್ಕೆ ಬಿಡುಗಡೆಯಾಗಲಿದೆ. ಟೀಸರ್ ಯಾವಾಗ ಬಿಡುಗಡೆಯಾಗಲಿದೆಯೋ ಎಂದು ಕಾಯುತ್ತಿದ್ದ ಯಶ್ ಅಭಿಮಾನಿಗಳು ಈ ಸುದ್ದಿ ಕೇಳಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಚಿತ್ರೀಕರಣ ಮುಗಿಸಿದ ಕೆಜಿಎಫ್​​​​​-2

ಇದನ್ನೂ ಓದಿ: KGF-2 ಶೂಟಿಂಗ್​ ಕಂಪ್ಲೀಟ್​.. ಗ್ರೂಪ್​​​ ಫೋಟೋ ಶೇರ್​ ಮಾಡಿದ ಚಿತ್ರತಂಡ

ನಿನ್ನೆಯಷ್ಟೇ ಕೆಜಿಎಫ್​ ಚಾಪ್ಟರ್ 2 ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಕುಂಬಳಕಾಯಿ ಹೊಡೆದಿತ್ತು. ಇದೀಗ ಟೀಸರ್ ಬಿಡುಗಡೆ ದಿನಾಂಕ ಹಾಗೂ ಸಮಯವನ್ನು ಅನೌನ್ಸ್ ಮಾಡುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. 2021 ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Last Updated : Dec 21, 2020, 10:36 AM IST

ABOUT THE AUTHOR

...view details