ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳಿಗೆ ಗುಡ್ ನ್ಯೂಸ್. ಮಹೇಶ್ ಬಾಬು ಅಭಿನಯದ 26ನೇ ಸಿನಿಮಾ 'ಸರಿಲೇರು ನೀಕೆವ್ವರು' ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ಇನ್ನು ಮುಂದಿನ ವರ್ಷ ಜನವರಿಯಲ್ಲಿ ಸಿನಿಮಾ ಬಿಡುಗಡೆಯಾಗುವುದಷ್ಟೇ ಬಾಕಿ.
ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳಿಗೆ 'ಸರಿಲೇರು ನೀಕೆವ್ವರು' ಚಿತ್ರತಂಡದಿಂದ ಗುಡ್ನ್ಯೂಸ್! - ಮಹೇಶ್ ಬಾಬು ಅಭಿಮಾನಿಗಳಿಗೆ ಗುಡ್ನ್ಯೂಸ್
ಜುಲೈ 5 ರಂದು ಆರಂಭವಾದ ನಮ್ಮ ಮಧುರ ಪ್ರಯಾಣ ಡಿಸೆಂಬರ್ 18 ರಂದು ಮುಕ್ತಾಯಗೊಂಡಿದೆ. ಮುಂದಿನ ವರ್ಷದ ಸಂಕ್ರಾಂತಿ, ಸಿನಿಪ್ರಿಯರಿಗೆ ಹಾಗೂ ಮಹೇಶ್ ಬಾಬು ಅಭಿಮಾನಿಗಳಿಗೆ ಜ್ಞಾಪಕಾರ್ಥವಾಗಿ ಉಳಿಯಲಿದೆ ' ಎಂದು ಅನಿಲ್ ಪೋಸ್ಟ್ ಹಾಕಿದ್ದಾರೆ.

'ಸರಿಲೇರು ನೀಕೆವ್ವರು' ಸಿನಿಮಾ ಚಿತ್ರೀಕರಣ ನಿನ್ನೆ ಮುಗಿದಿದ್ದು, ಈ ವಿಷಯವನ್ನು ಅನಿಲ್ ರಾವಿಪೂಡಿ ತಮ್ಮ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ. 'ಜುಲೈ 5 ರಂದು ಆರಂಭವಾದ ನಮ್ಮ ಮಧುರ ಪ್ರಯಾಣ ಡಿಸೆಂಬರ್ 18 ರಂದು ಮುಕ್ತಾಯಗೊಂಡಿದೆ..ಮುಂದಿನ ವರ್ಷದ ಸಂಕ್ರಾಂತಿ, ಸಿನಿಪ್ರಿಯರಿಗೆ ಹಾಗೂ ಮಹೇಶ್ ಬಾಬು ಅಭಿಮಾನಿಗಳಿಗೆ ಜ್ಞಾಪಕಾರ್ಥವಾಗಿ ಉಳಿಯಲಿದೆ ' ಎಂದು ಅನಿಲ್ ಪೋಸ್ಟ್ ಹಾಕಿದ್ದಾರೆ. ಇದರೊಂದಿಗೆ ಶೂಟಿಂಗ್ ಸೆಟ್ನಲ್ಲಿ ಕ್ಲಿಕ್ ಮಾಡಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಮಹೇಶ್, ಅನಿಲ್ ರಾವಿಪೂಡಿ ಹಾಗೂ ಚಿತ್ರತಂಡದ ಇನ್ನಿತರ ಸದಸ್ಯರಿದ್ದಾರೆ.
ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡಾ ಭರದಿಂದ ಸಾಗಿದ್ದು ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಶ್ರಮಿಸುತ್ತಿದೆ. ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಉಳಿದಂತೆ ವಿಜಯಶಾಂತಿ, ರಾಜೇಂದ್ರ ಪ್ರಸಾದ್, ಬಂಡ್ಲ ಗಣೇಶ್, ಪ್ರಕಾಶ್ ರಾಜ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಲ್ ಸುಂಕರ ಹಾಗೂ ದಿಲ್ ರಾಜು ಜೊತೆ ಸೇರಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.