ಕರ್ನಾಟಕ

karnataka

ETV Bharat / sitara

ದರ್ಶನ್ ಮಗ ಆಯ್ತು, ಸ್ಯಾಂಡಲ್​​​​​​​​ವುಡ್​​​​​ಗೆ ಎಂಟ್ರಿ ಕೊಡ್ತಿದ್ದಾರೆ ಗೋಲ್ಡನ್ ಸ್ಟಾರ್ ಪುತ್ರ - undefined

'ಗೀತಾ' ಸಿನಿಮಾದಲ್ಲಿ ನಟಿಸುವ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಗನೊಂದಿಗೆ ಇರುವ ಕೆಲವೊಂದು ಫೋಟೋಗಳನ್ನು ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ.

ಅಪ್ಪನೊಂದಿಗೆ ವಿಹಾನ್​

By

Published : Apr 11, 2019, 4:29 PM IST

Updated : Apr 11, 2019, 4:43 PM IST

ಸ್ಟಾರ್ ನಟರ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಅಪ್ಪಂದಿರ ಜೊತೆ ಸ್ಕ್ರೀನ್ ಶೇರ್ ಮಾಡುವುದು ಹೊಸತೇನಲ್ಲ. ಪುನೀತ್ ರಾಜ್​ಕುಮಾರ್ 6 ತಿಂಗಳ ಮಗುವಾಗಿರುವಾಗಲೇ ತಮ್ಮ ತಂದೆ ಡಾ. ರಾಜ್​​ ಜೊತೆ 'ಪ್ರೇಮದ ಕಾಣಿಕೆ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಗೋಲ್ಡನ್‌ ಸ್ಟಾರ್‌ ಪುತ್ರ ವಿಹಾನ್‌ ಸರದಿ.

ಪುತ್ರ ವಿಹಾನ್ ಜೊತೆಗೆ ಗಣೇಶ್​

ವಿಹಾನ್ 'ಗೀತಾ' ಚಿತ್ರದಲ್ಲಿ ಅಪ್ಪನ ಜೊತೆ ಯಾವುದೇ ಭಯ ಇಲ್ಲದೆ ಕ್ಯಾಮರಾ ಮುಂದೆ ನಿಂತು ಪೋಸ್ ಕೊಟ್ಟಿದ್ದಾನೆ. ಸಿನಿಮಾದಲ್ಲಿ ಈ ಪೋರ, ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಈಗಾಗಲೇ ಶೂಟಿಂಗ್​ನಲ್ಲಿ ಭಾಗವಹಿಸಿರುವ ವಿಹಾನ್​​​​ ಫೋಟೋಗಳನ್ನು ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. 'ಗೀತಾ' ಚಿತ್ರದಲ್ಲಿ ಗಣೇಶ್​​​​​​​ಗೆ ನಾಯಕಿಯಾಗಿ ಮಲಯಾಳಂ ನಟಿ ಪಾರ್ವತಿ ಅರುಣ್ ನಟಿಸಿದ್ದಾರೆ. ವಿಜಯ್ ನಾಗೇಂದ್ರ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಸೈಯದ್ ಸಲಾಂ ಬಂಡವಾಳ ಹೂಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಜೊತೆ ಅವರ ಮಗಳು ನಿವೇದಿತಾ 'ಅಂಡಮಾನ್​​​' ಚಿತ್ರದಲ್ಲಿ ಅಪ್ಪನ‌ ಜೊತೆ ಮಿಂಚಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್​​​ 'ಐರಾವತ' ಹಾಗೂ 'ಯಜಮಾನ' ಚಿತ್ರದಲ್ಲಿ ಜೂನಿಯರ್ ದರ್ಶನ್ ಆಗಿ ಅಭಿನಯಿಸಿದ್ದರು. ಅಲ್ಲದೇ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯ 'ದೇವಕಿ' ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಜೊತೆ ನಟಿಸಿದ್ದಾರೆ. ಈಗ ಗೋಲ್ಡನ್‌ ಸ್ಟಾರ್ ಗಣೇಶ್ ಪುತ್ರ ವಿಹಾನ್ ಅಪ್ಪನ ಜೊತೆ ನಟಿಸೋಕೆ ಹೆಜ್ಜೆ ಇಟ್ಟಿದ್ದಾರೆ.
Last Updated : Apr 11, 2019, 4:43 PM IST

For All Latest Updates

TAGGED:

ABOUT THE AUTHOR

...view details