ಗೋಲ್ಡನ್ ಸ್ಟಾರ್ ಗಣೇಶ್ರ ಎರಡನೇ ತಮ್ಮ ಉಮೇಶ್ ಸೂರಜ್ ಕೃಷ್ಣ ಈಗಾಗಲೇ 'ನಾನೇ ರಾಜ' ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಸದ್ದಿಲ್ಲದೇ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು, ಚಿತ್ರದ ಟೀಸರ್ ಬಿಡುಗಡೆಯಾಗಿದೆ.
'ನಾನೇ ರಾಜ'... ಆದ್ರೂ ಅಣ್ಣನೇ ನಂಗೆ ಸ್ಫೂರ್ತಿ ಎಂದ ಗೋಲ್ಡನ್ ಸ್ಟಾರ್ ಸಹೋದರ - ಸೂರಜ್ ಕೃಷ್ಣ
'ನಾನೇ ರಾಜ' ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ರ ತಮ್ಮ ಸೂರಜ್ ಕೃಷ್ಣ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು, ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದಿರುವ ಅವರಿಗೆ ಅಣ್ಣನೇ ಸ್ಫೂರ್ತಿಯಂತೆ.
ಇನ್ನು ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ರ ತಮ್ಮ ಸೂರಜ್ ಕೃಷ್ಣ ಚಿತ್ರರಂಗಕ್ಕೆ ಬಂದಿದ್ದೆ ಒಂದು ಅನಿರೀಕ್ಷಿತವಂತೆ. ಅಲ್ಲದೆ ನಾಯಕನಾಗಿ ನಾನು ನಟಿಸುತ್ತೇನೆ ಎಂದು ನಟ ಸೂರಜ್ ಕನಸು ಕೂಡ ಕಂಡಿರಲಿಲ್ಲವಂತೆ. ಹೀಗೆ ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಸೂರಜ್ಗೆ ಅಣ್ಣ ಗೋಲ್ಡನ್ ಸ್ಟಾರ್ ಗಣೇಶ್ ಸ್ಫೂರ್ತಿಯಂತೆ.
ಸೂರಜ್ ಎಂಬಿಎ ಪದವಿ ಮುಗಿಸಿದ್ದು, ಕಾಲೇಜು ಸಮಯದಲ್ಲಿ ಅಣ್ಣ ಗಣೇಶ್ ಜೊತೆ ಶೂಟಿಂಗ್ ಸೆಟ್ಟಿಗೆ ಹೋಗುತ್ತಿದ್ದುದು ಬಿಟ್ಟರೆ ಅವರಿಗೆ ಚಿತ್ರರಂಗದ ಬಗ್ಗೆ ಅಷ್ಟು ಗೊತ್ತಿಲ್ಲವಂತೆ. ನಾನೇ ರಾಜ ಚಿತ್ರದಲ್ಲಿ ನಾನು ಆ್ಯಕ್ಟ್ ಮಾಡುವಾಗ ಅಣ್ಣನನ್ನು ನೆನೆಸಿಕೊಂಡೆ ನಟಿಸಿದ್ದೇನೆ. ಚಿತ್ರದಲ್ಲಿ ಆ್ಯಕ್ಟಿಂಗ್, ಡ್ಯಾನ್ಸ್, ಡೈಲಾಗ್ ಡೆಲಿವರಿ ಏನೇ ಮಾಡಿದರೂ ಅದಕ್ಕೆ ನನ್ನ ಅಣ್ಣನೇ ಸ್ಫೂರ್ತಿ. ನಾನು ಈ ಚಿತ್ರದಲ್ಲಿ ಏನೇ ಮಾಡಿದ್ದರೂ ಎಲ್ಲ ಕ್ರೆಡಿಟ್ ನನ್ನ ಅಣ್ಣನಿಗೇ ಸಲ್ಲುತ್ತದೆ. ಅಲ್ಲದೆ, ಇಂದು ಸಹ ನಾನು ನನ್ನ ಅಣ್ಣ-ಅತ್ತಿಗೆ ಆಶೀರ್ವಾದ ಪಡೆದುಕೊಂಡೇ ಇಲ್ಲಿಗೆ ಬಂದಿದ್ದೇನೆ ಎಂದು ನಟ ಸೂರಜ್ ಕೃಷ್ಣ, 'ನಾನೇ ರಾಜ' ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿದರು.