ಕರ್ನಾಟಕ

karnataka

ETV Bharat / sitara

ನಮ್ಮ ಸಿನಿಮಾ ತಂಟೆಗೆ ಬಂದ್ರೆ ಸುಮ್ಮನಿರೋಲ್ಲ...ಪರಭಾಷೆ ಸಿನಿಮಾಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಎಚ್ಚರಿಕೆ! - ವಿಜಯ ನಾಗೇಂದ್ರ

ಗಣೇಶ್ ವಿಭಿನ್ನ ಪಾತ್ರದಲ್ಲಿ ನಟಿಸಿರುವ 'ಗೀತಾ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ನಿನ್ನೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ತಮ್ಮ ಚಿತ್ರದ ಬಗ್ಗೆ ಮಾಹಿತಿ ನೀಡಿದೆ. ಇನ್ನು ಪರಭಾಷೆ ಚಿತ್ರಗಳಿಂದ ನಮ್ಮ ಸಿನಿಮಾಗೆ ತೊಂದರೆಯಾದರೆ ಉಗ್ರ ಹೋರಾಟ ಮಾಡುವುದಾಗಿ ಗಣೇಶ್ ಎಚ್ಚರಿಸಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್

By

Published : Sep 24, 2019, 1:21 PM IST

Updated : Sep 24, 2019, 3:08 PM IST

ಗೀತಾ, ಕರಾಟೆ ಕಿಂಗ್ ಶಂಕರ್​​​ ನಾಗ್ ಅಭಿನಯದ ಸೂಪರ್ ಹಿಟ್​​ ಸಿನಿಮಾ. ಗೋಲ್ಡನ್ ಸ್ಟಾರ್ ಗಣೇಶ್ ಶಂಕರ್​​​​​ನಾಗ್ ರೀತಿ ಕ್ಯಾಪ್ ತೊಟ್ಟು ಗೀತಾ ಜಪ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಟ್ರೈಲರ್​​​​ ಹಾಗೂ ಟೈಟಲ್​​​​​​ನಿಂದ ಟಾಕ್ ಆಫ್ ದಿ ಟೌನ್ ಎನಿಸಿರುವ ಸಿನಿಮಾ ಇದೇ ತಿಂಗಳ 27ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಪರಭಾಷೆ ಸಿನಿಮಾಗಳಿಗೆ ಎಚ್ಚರಿಸುತ್ತಿರುವ ಗಣೇಶ್

ಈ ಸಿನಿಮಾ ಬಗ್ಗೆ ಮಾತನಾಡಲು 'ಗೀತಾ' ಚಿತ್ರತಂಡ ಮಾಧ್ಯಮದವರ ಮುಂದೆ ಹಾಜರಾಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್, ಶಾನ್ವಿ ಶ್ರೀವಾತ್ಸವ್, ಸುಧಾರಾಣಿ, ನಿರ್ದೇಶಕ ವಿಜಯ ನಾಗೇಂದ್ರ, ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್​​​​​​, ನಿರ್ಮಾಪಕರಾದ ಸೈಯದ್ ಸಲಾಂ, ವಿತರಕ ಜಾಕ್ ಮಂಜು ಹೀಗೆ ಇಡೀ ಚಿತ್ರತಂಡ ಉಪಸ್ಥಿತಿ ಇತ್ತು. 1980ರ ಹಿನ್ನೆಲೆ ಕಥೆ ಹೊಂದಿರುವ 'ಗೀತಾ' ಚಿತ್ರದಲ್ಲಿ ಗಣೇಶ್​​​​​​ ಕನ್ನಡ ಹೋರಾಟಗಾರ ಹಾಗೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 'ಗೀತಾ' ಸಿನಿಮಾ ಬಿಡುಗಡೆಯಾಗುತ್ತಿರುವ ದಿನದಂದು ಪರಭಾಷೆ ಸಿನಿಮಾವೊಂದು ತೆರೆ ಕಾಣುತ್ತಿದೆ. ಆ ಪರಭಾಷೆಯ ಸಿನಿಮಾದಿಂದ ಒಂದು ವೇಳೆ ನಮ್ಮ ಕನ್ನಡ ಸಿನಿಮಾಗಳಿಗೆ, ಥಿಯೇಟರ್ ಸಮಸ್ಯೆ ಆದ್ರೆ ಪ್ರತಿಭಟನೆ ಮಾಡುವುದಾಗಿ ಗಣೇಶ್ ಎಚ್ಚರಿಕೆ ನೀಡಿದ್ದಾರೆ.

ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ್​​​​​​​​​ ಹಾಗೂ ಪ್ರಯಾಗ ಮಾರ್ಟಿನ್ ಸೇರಿ ಮೂವರು ನಾಯಕಿಯರು ರೊಮ್ಯಾನ್ಸ್ ಮಾಡಿದ್ದಾರೆ. ರಾಜಕುಮಾರ ಸಿನಿಮಾಗೆ ಸಹ ನಿರ್ದೇಶಕನಾಗಿ‌‌ ಕೆಲಸ‌‌ ಮಾಡಿದ್ದ ವಿಜಯ ನಾಗೇಂದ್ರ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಕನ್ನಡ ಭಾಷೆ ಬಗ್ಗೆ ಕಥೆ ಹೊಂದಿದ್ದು ಕನ್ನಡ ಪ್ರೇಮಿಗಳಿಗೆ ಖಂಡಿತ ಇಷ್ಟ ಆಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ನಿರ್ಮಿಸಿರುವ ಸಿನಿಮಾದಲ್ಲಿ‌ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಹೋರಾಟಗಾರನಾಗಿ ಯಾವ ರೀತಿ ಅಬ್ಬರಿಸುತ್ತಾರೆ ಅನ್ನೋದು ಈ ವಾರ ಗೊತ್ತಾಗಲಿದೆ.

Last Updated : Sep 24, 2019, 3:08 PM IST

ABOUT THE AUTHOR

...view details