ಗೋಲ್ಡನ್ ಸ್ಟಾರ್ ಗಣೇಶ್ ಲವರ್ ಬಾಯ್ ಹಾಗೂ ಕನ್ನಡಪರ ಹೋರಾಟಗಾರನಾಗಿ ಎರಡು ಶೇಡ್ಗಳಲ್ಲಿ ನಟಿಸಿದ್ದ 'ಗೀತಾ' ಸಿನಿಮಾ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ. ಚಿತ್ರದಲ್ಲಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ್ ಹಾಗೂ ಪ್ರಯಾಗ ಮಾರ್ಟಿನ್ ಗಣೇಶ್ ಜೊತೆ ನಾಯಕಿಯರಾಗಿ ಅಭಿನಯಿಸಿದ್ದಾರೆ.
'ಗೀತಾ' ಸಿನಿಮಾ ಕಲೆಕ್ಷನ್ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಏನಂದ್ರು? - Ganesh talked about geeta movie collection
'ಗೀತಾ' ಸಿನಿಮಾ ಟ್ರೇಲರ್ ಬಿಡುಗಡೆಯಾದಾಗ ದೊರೆತಷ್ಟು ಪ್ರತಿಕ್ರಿಯೆ ಸಿನಿಮಾ ಬಿಡುಗಡೆಯಾದಾಗ ದೊರೆಯಲಿಲ್ಲ. ಸಿನಿಮಾ ಅಂದುಕೊಂಡಂತೆ ಹಿಟ್ ಆಗದಿದ್ದರೂ ಒಳ್ಳೆ ಸಿನಿಮಾ ಮಾಡಿದ ನೆಮ್ಮದಿ ಇದೆ ಎಂದು ನಟ ಗಣೇಶ್ ಹೇಳಿದ್ದಾರೆ.
ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿ ಒಳ್ಳೆ ಪ್ರದರ್ಶನಗೊಂಡು ಲಾಭ ಮಾಡುತ್ತಿದೆ. ಚಿತ್ರದ ಸಕ್ಸಸ್ ಬಗ್ಗೆ ಖುಷಿ ಹಂಚಿಕೊಳ್ಳಲು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ನಟ ಗಣೇಶ್, ನಿರ್ದೇಶಕ ವಿಜಯ ನಾಗೇಂದ್ರ, ನಿರ್ಮಾಪಕ ಸಯ್ಯದ್ ಸಲಾಂ ಹಾಗೂ ಕಾರ್ಯಕಾರಿ ನಿರ್ಮಾಪಕ ಸನತ್ ಹಾಜರಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣೇಶ್, ನಾವು ಅಂದುಕೊಂಡಂತೆ ಸಿನಿಮಾ ಹಿಟ್ ಆಗಲಿಲ್ಲ. ಆದರೂ ನಮಗೆ ಯಾವುದೇ ನಷ್ಟ ಆಗಿಲ್ಲ, ಒಂದು ಒಳ್ಳೆ ಸಿನಿಮಾ ಮಾಡಿದ ಖುಷಿ ಇದೆ ಅಂದ್ರು ಗೋಲ್ಡನ್ ಸ್ಟಾರ್ . ಮೊದಲ ಎರಡು ದಿನಗಳ ಕಲೆಕ್ಷನ್ ಬಗ್ಗೆ ಕೂಡಾ ಗಣೇಶ್ ಮಾತನಾಡಿದರು. ನಿರ್ಮಾಪಕ ಸಯ್ಯದ್ ಸಲಾಂ ಕೂಡಾ ಮಾತನಾಡಿ ಅಂದುಕೊಂಡಂತೆ ಸಿನಿಮಾಗೆ ಪ್ರತಿಕ್ರಿಯೆ ದೊರೆಯದಿದ್ದರೂ ಮೈಸೂರು ಸೇರಿದಂತೆ ಅನೇಕ ಕಡೆ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು.