ಕೊರೊನಾ 2ನೇ ಅಲೆ ಮುಗಿದಿದ್ದು ಎಲ್ಲ ಕಿರುತೆರೆ ವಾಹಿನಿಗಳಲ್ಲಿ ಇದೀಗ ರಿಯಾಲಿಟಿ ಶೋಗಳು ಆರಂಭವಾಗುತ್ತಿವೆ. ಜೀ ಕನ್ನಡ ವಾಹಿನಿಯಲ್ಲಿ 1 ವರ್ಷದ ಹಿಂದೆಯೇ ಆರಂಭವಾಗಬೇಕಿದ್ದ 'ಡ್ಯಾಡಿ ನಂಬರ್ 1' ರಿಯಾಲಿಟಿ ಶೋ ಇದೀಗ ಮತ್ತೆ ಸದ್ದು ಮಾಡುತ್ತಿದೆ.
ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಲೇ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಗಮನ ಸೆಳೆಯುವ ಕಾಮಿಡಿ ಟೈಮ್ನಿಂದ ಗೋಲ್ಡನ್ ಸ್ಟಾರ್ ಆಗಿರುವ ನಟ ಗಣೇಶ್, ಡ್ಯಾಡಿ ನಂಬರ್ ಒನ್ ಶೋ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ.