ಕರ್ನಾಟಕ

karnataka

ETV Bharat / sitara

ಕೊರೊನಾ ಹಿನ್ನೆಲೆ ಗೋಲ್ಡನ್ ಗ್ಲೋಬ್​ ಅರ್ಹತಾ ಮಾನದಂಡ ಬದಲಿಸಿದ ಹೆಚ್​ಎಫ್​ಪಿಎ - ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಭ

ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ 15 ತಿಂಗಳು ತಮ್ಮ ಮೂಲ ದೇಶದಲ್ಲಿ ಚಿತ್ರ ಬಿಡುಗಡೆಯಾಗಿರಬೇಕು ಎಂಬ ಮಾನದಂಡವನ್ನು ರದ್ದು ಮಾಡಲಾಗಿದೆ.

Golden Globes eligibility criteria tweaked due to COVID-19
ಗೋಲ್ಡನ್ ಗ್ಲೋಬ್ಸ್ ಅರ್ಹತಾ ಮಾನದಂಡಗಳ ಬದಲಾವಣೆ

By

Published : May 10, 2020, 8:52 AM IST

ಲಾಸ್ ಏಂಜಲೀಸ್: ಮುಂಬರುವ 93ನೇ ಗೋಲ್ಡನ್ ಗ್ಲೋಬ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿದೇಶಿ ಭಾಷೆಯ ಚಲನಚಿತ್ರಗಳ ಅರ್ಹತಾ ಮಾನದಂಡಗಳನ್ನು ಹಾಲಿವುಡ್ ವಿದೇಶಿ ಪತ್ರಿಕಾ ಮಂಡಳಿ (ಹೆಚ್​ಎಫ್​ಪಿಎ) ಬದಲಾಯಿಸಿದೆ.

ಇದರಿಂದಾಗಿ ಈ ಮೊದಲಿದ್ದ, ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ 15 ತಿಂಗಳು ತಮ್ಮ ಮೂಲ ದೇಶದಲ್ಲಿ ಚಿತ್ರ ಬಿಡುಗಡೆಯಾಗಿರಬೇಕು ಎಂಬ ಮಾನದಂಡವನ್ನು ರದ್ದು ಮಾಡಲಾಗಿದೆ.

ಹೊಸ ನಿಯಮದ ಪ್ರಕಾರ, ಮುಂಬರುವ ಮಾರ್ಚ್​ 15 ರಿಂದ ಹೆಚ್​ಎಫ್​ಪಿಎ ಹೇಳುವ ಅವಧಿಯವರೆಗೆ ಯಾವುದೇ ದೇಶದಲ್ಲಿ ಯಾವುದೇ ಸ್ವರೂಪ (ಉದಾ : ಚಿತ್ರ ಮಂದಿರ, ಪೇ-ಪರ್​-ವೀವ್ , ಸಬ್​​ಸ್ಕ್ರೈಬ್ಡ್​ ಕೇಬಲ್ ಚಾನೆಲ್ ) ದಲ್ಲಿ​ ಚಿತ್ರ ಬಿಡುಗಡೆಯಾಗಿದ್ದರೆ ಸಾಕು.

For All Latest Updates

ABOUT THE AUTHOR

...view details