ಕರ್ನಾಟಕ

karnataka

ETV Bharat / sitara

ಅಭಿನಯ ಚಕ್ರವರ್ತಿ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್: ಗೋಲ್ಡನ್ ಹುಡುಗ ನೀರಜ್ ಚೋಪ್ರಾ ಸ್ಪೆಷಲ್ ವಿಶ್​ - happy birthday to kiccha sudeep birthday

ಕಿಚ್ಚ ಸುದೀಪ್ ಬರ್ತ್ ಡೇ ಹಿನ್ನೆಲೆ ಈ ವರ್ಷ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅಡ್ವಾನ್ಸ್ ಆಗಿ ಶುಭಾಶಯ ಹೇಳಿದ್ದಾರೆ.

ಅಭಿನಯ ಚಕ್ರವರ್ತಿ
ಅಭಿನಯ ಚಕ್ರವರ್ತಿ

By

Published : Sep 1, 2021, 2:34 PM IST

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಅಭಿನಯ ಚಕ್ರವರ್ತಿಯಾಗಿ ಹೊರ ಹೊಮ್ಮಿರುವ ನಟ‌ ಕಿಚ್ಚ ಸುದೀಪ್‌ ಹುಟ್ಟು ಹಬ್ಬಕ್ಕೆ ಒಂದು ದಿನ ಮಾತ್ರ ಬಾಕಿ. ಅಷ್ಟರಲ್ಲೇ ಅಭಿಮಾನಿಗಳು ಹಾಗು ಆತ್ಮೀಯ ಸ್ನೇಹಿತರು ಕಿಚ್ಚನಿಗೆ ಅಡ್ವಾನ್ಸ್ ಆಗಿ ಹುಟ್ಟು ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ಕಿಚ್ಚ ಸುದೀಪ್​ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದರು. ಆದರೆ, ಈ ಬಾರಿ ಕಿಚ್ಚನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅದ್ಧೂರಿಯಾಗಿ ಜನ್ಮದಿನ ಸೆಲೆಬ್ರೆಟ್ ಮಾಡಲು ರೆಡಿಯಾಗಿದ್ದಾರೆ.

ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ಬರ್ತ್ ಡೇ ಹಿನ್ನೆಲೆ ಈ ವರ್ಷ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಕೂಡ ಅಡ್ವಾನ್ಸ್ ಆಗಿ ಶುಭಾಶಯ ಹೇಳಿದ್ದಾರೆ. ಜೊತೆಗೆ ಸುದೀಪ್ ಅಭಿನಯದ ಹೈ ವೋಲ್ಟೇಜ್ ಚಿತ್ರ ವಿಕ್ರಾಂತ್ ರೋಣವನ್ನ ನೋಡಲು ಕಾತುರನಾಗಿದ್ದೇನೆ ಅಂತಾ ತಿಳಿಸಿದ್ದಾರೆ.

ಕಿಚ್ಚ ಸುದೀಪ್‌ ಹುಟ್ಟು ಹಬ್ಬಕ್ಕೆ ಸ್ಪೆಷಲ್ ವಿಶ್​ ಮಾಡಿದ ನಿರಜ್ ಚೋಪ್ರಾ

ಸಿಡಿಪಿ ಹಂಚಿಕೊಂಡ ಅನಿಲ್ ಕುಂಬ್ಳೆ

ನಮ್ಮ ಭಾರತದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಕೂಡ ಕಿಚ್ಚನಿಗೆ ಸ್ಪೆಷಲ್ ಉಡುಗೊರೆ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ವಿಶೇಷವಾದ ಕಾಮನ್ ಡಿಪಿಯ ಚಿತ್ರವೊಂದನ್ನ ರೆಡಿ ಮಾಡಿದ್ದಾರೆ.

ಆ ಫೊಟೋವನ್ನು ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ತಮ್ಮ ಟ್ವಿಟರ್ ಖಾತೆಯಲ್ಲಿ ಅನಾವರಣ ಮಾಡುವ ಮೂಲಕ ಕಿಚ್ಚನಿಗೆ ಸರ್​ಪ್ರೈಸ್ ನೀಡಿದರು. ಚಿತ್ರವನ್ನು ಸುದೀಪ್ ದೊಡ್ಡ ಮೈದಾನವೊಂದರಲ್ಲಿ ನಿಂತು ತನ್ನ ಅಭಿಮಾನಿಗಳನ್ನು ಮಾತನಾಡಿಸುತ್ತಿರುವ ಅಭೂತ ಪೂರ್ವ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ.

ಸಿಡಿಪಿ ಎಂದರೆ ಕಾಮನ್ ಡಿಸ್ಪ್ಲೆ ಪ್ರೊಫೈಲ್. ವಿಶೇಷ ಸಂದರ್ಭಗಳಲ್ಲಿ ಶುಭಾಶಯ ಕೋರುವ ಸಲುವಾಗಿ ಎಲ್ಲರೂ ಹಾಕಿಕೊಳ್ಳಲು ರೂಪಿಸುವ ಚಿತ್ರವನ್ನು ಸಿಡಿಪಿ ಎನ್ನುತ್ತಾರೆ.

ಅನಿಲ್ ಕುಂಬ್ಳೆ ಬಿಡುಗಡೆಗೊಳಿಸಿದ್ದ ಪೋಸ್ಟರ್

ಇನ್ನು ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಸುದೀಪ್ ಅವರ ಬಯೋಗ್ರಫಿ ಆಡಿಯೋ ಮತ್ತು ಇ- ಬುಕ್ ಬರುತ್ತಿದೆ. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ 'ಕನ್ನಡ ಮಾಣಿಕ್ಯ ಕಿಚ್ಚ' ಹೆಸರಿನ ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿ ದಾಖಲೆ ರೀತಿಯಲ್ಲಿ ಮಾರಾಟ ಆಗಿತ್ತು.

ಈ ಪುಸ್ತಕವೇ ಮೈ ಲ್ಯಾಂಗ್ ಆ್ಯಪ್ ಮೂಲಕ ಆಡಿಯೋ ಬಯೋಗ್ರಫಿ ಮತ್ತು ಇ-ಬುಕ್ ರೂಪದಲ್ಲಿ ಹೊರ ಬರುತ್ತಿದೆ. ಬಿಗ್​ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ಯ ಈ ಪುಸ್ತಕಕ್ಕೆ ಧ್ವನಿ ನೀಡಿದ್ದು, ಸುದೀಪ್ ಅವರ ಬದುಕಿನ ಅನೇಕ ಘಟನೆಗಳನ್ನು ಮನಸೆಳೆಯುವಂತೆ ಓದಿದ್ದಾರೆ.

‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕದ ಆಡಿಯೋ ಬುಕ್​ಗೆ ಧ್ವನಿ ನೀಡುತ್ತಿರುವ ಚಂದನ್ ಆಚಾರ್

ಬೆಂಗಳೂರಿನ ಕಾಯಕ ಪ್ರಕಾಶನ ಹೊರತಂದ ಈ ಕೃತಿಯು ಬಿಡುಗಡೆಯಾದ ಎರಡನೇ ದಿನಕ್ಕೆ ಮರುಮುದ್ರಣಗೊಂಡಿತ್ತು. ಈಗ ಆಡಿಯೋ ರೂಪದಲ್ಲಿ ಕಿಚ್ಚನ ಬದುಕಿನ ಕತೆ ಅನಾವರಣ ಆಗಲಿದೆ. ಹೀಗೆ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ಒಂದು ದಿನ‌ ಮುಂಚಿತವಾಗಿ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಥ್ರಿಲ್ ಆಗುವ ಉಡುಗೊರೆಗಳನ್ನು ನೀಡುತ್ತಿದ್ದಾರೆ. ನಾಳೆ 'ವಿಕ್ರಾಂತ್ ರೋಣ' ಚಿತ್ರತಂಡದಿಂದ ಸ್ಪೆಷಲ್ ಟೀಸರ್​ವೊಂದು ರಿವೀಲ್ ಆಗುತ್ತಿದ್ದು, ಸುದೀಪ್ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ.

ABOUT THE AUTHOR

...view details