ಕರ್ನಾಟಕ

karnataka

ETV Bharat / sitara

ಟಾಕಿಂಗ್​ ಸ್ಟಾರ್​​ ಬಗ್ಗೆ ಅಚ್ಚರಿಯ ಮಾತನ್ನಾಡಿದ್ರು ಅಮ್ಮ ಗಿರಿಜಾ ಲೋಕೇಶ್​ - ಸೃಜನ್ ಲೋಕೇಶ್ ನಟಿಸಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರ

ಸೃಜನ್ ಲೋಕೇಶ್ ನಟಿಸಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರಿಜಾ ಲೋಕೇಶ್​​, ತನ್ನ ಮಗನ ಸಾಧನೆಯ ಬಗ್ಗೆ ಕಣ್ಣಂಚನ್ನು ಒದ್ದೆ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು, ನನ್ನ ಮಗನಿಗೆ ಯಾವಾಗಲೂ ಬೈಯುತ್ತಲೇ ಇದ್ದೆ. ನೀನೊಬ್ಬ ವೇಸ್ಟ್ ಬಾಡಿ ಎಂದು ಹೀಯಾಳಿಸುತ್ತಿದ್ದೆ. ಆದರೆ ಅವರ ಅಪ್ಪ ತನ್ನ ಮಗನನ್ನು ವಹಿಸಿಕೊಂಡು ಮಾತನಾಡುತ್ತಿದ್ದರು ಎಂದು ಸೃಜನ್​ ಲೋಕೇಶ್​ ಬಗ್ಗೆ ಗಿರಿಜಾ ಲೋಕೇಶ್​​​ ಮೆಚ್ಚುಗೆ ವ್ಯಕ್ತಪಡಿಸಿದರು.

ಗಿರಿಜಾ ಲೋಕೇಶ್​​, ನಟಿ

By

Published : Aug 26, 2019, 10:44 AM IST

ನನ್ನ ಮಗ ಇಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಸೃಜನ್ ಲೋಕೇಶ್ ಬಗ್ಗೆ ಅವರ ತಾಯಿ ಗಿರಿಜಾ ಲೋಕೇಶ್ ಭಾವನಾತ್ಮಕವಾಗಿ ನುಡಿದರು.

ಸೃಜನ್ ಲೋಕೇಶ್ ನಟಿಸಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಮಗನ ಸಾಧನೆಯ ಬಗ್ಗೆ ಕಣ್ಣಂಚನ್ನು ಒದ್ದೆ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಸೃಜನ್​ ಬಗ್ಗೆ ಅಮ್ಮ ಗಿರಿಜಾ ಲೋಕೇಶ್​​​ ಏನ್​ ಹೇಳಿದ್ರು ಗೊತ್ತಾ...?

ನಾನು ನನ್ನ ಮಗನಿಗೆ ಯಾವಾಗಲೂ ಬೈಯುತ್ತಲೇ ಇದ್ದೆ. ನೀನೊಬ್ಬ ವೇಸ್ಟ್ ಬಾಡಿ ಎಂದು ಹೀಯಾಳಿಸುತ್ತಿದ್ದೆ. ಆದರೆ ಅವರ ಅಪ್ಪ ತನ್ನ ಮಗನನ್ನು ವಹಿಸಿಕೊಂಡು ಮಾತನಾಡುತ್ತಿದ್ದರು. ಅಲ್ಲದೆ ಮಗನ ಬಗ್ಗೆ ಇದೇ ರೀತಿ ಮಾತನಾಡುತ್ತಿದ್ದರೆ, ನಿನಗೆ ಡೈವರ್ಸ್ ಕೊಡ್ತೀನಿ ಅಂತ ಲೋಕೇಶ್ ನನಗೆ ಎಚ್ಚರಿಕೆ ಕೊಟ್ಟಿದ್ದರು ಎಂದು ಹಿಂದಿನದ್ದನ್ನ ನೆನಪು ಮಾಡಿಕೊಂಡರು.

ಲೋಕೇಶ್ ಅವರಿಗೆ ಮಗನ ಮೇಲೆ ಏನೋ ಒಂದು ನಂಬಿಕೆ ಇತ್ತು. ಮಗ ದೊಡ್ಡ ಸಾಧನೆಯನ್ನು ಮಾಡುತ್ತಾನೆ ಅನ್ನೋದು ಅವರಿಗೆ ಗೊತ್ತಿತ್ತು. ಮಗನ ಪರ ಯಾವಾಗಲೂ ಇರುತ್ತಿದ್ದರು. ಆದರೆ ಈಗ ಅವನನ್ನು ನೋಡಿದ್ರೆ ಲೋಕೇಶ್ ಅವರು ಹೇಳಿದ ಮಾತು ನಿಜವಾಗಿದೆ ಅನಿಸುತ್ತಿದೆ ಎಂದು ಗಿರಿಜಾ ಹೇಳಿದ್ರು.

ಅಲ್ಲದೇ ಜನಗಳು ಅವನನ್ನು ಟಾಕಿಂಗ್ ಸ್ಟಾರ್ ಅಂತ ಕರೀತಾರೆ. ಆದರೆ ಅವನು ಮನೆಯಲ್ಲಿ ಒಂದು ಮಾತನ್ನು ಸಹ ಆಡುವುದಿಲ್ಲ. ಥೂ ಇಂಥ ಮಕ್ಕಳು ಯಾರಿಗೂ ಬೇಡ ಎಂದು ನನಗೆ ಎಷ್ಟೋ ಬಾರಿ ಅನಿಸಿದೆ. ಆದರೆ ಅವನು ಮನಸೊಳಗೆ ಏನೋ ಒಂದು ಗುಣಾಕಾರ ಹಾಕಿಕೊಂಡೇ ಕೆಲಸ ಮಾಡುತ್ತಾನೆ ಎಂದು ಸೃಜನ್​ ಲೋಕೇಶ್​ ಬಗ್ಗೆ ತಾಯಿ ಗಿರಿಜಾ ಲೋಕೇಶ್​​ ಮೆಚ್ಚುಗೆ ವ್ಯಕ್ತಪಡಿಸಿದ್ರು.

ABOUT THE AUTHOR

...view details