‘ಬರವಣಿಗೆ ನನ್ನ ಪ್ಯಾಶನ್. ಸೀರಿಯಲ್ ಶೂಟಿಂಗ್ ಮಾಡುವಾಗ ನಾನು ಬ್ಯುಸಿ ಇರುತ್ತಿದ್ದೆ. ಕೆಲವು ಗಂಟೆಗಳ ಸಮಯವೂ ಸಿಗುತ್ತಿರಲಿಲ್ಲ. ಈಗ ನನಗೆ ಬೇಕಾದಷ್ಟು ಸಮಯವಿದ್ದು, ಬರೆಯಬೇಕೆಂದು ನಿರ್ಧರಿಸಿರುವೆ’ ಎಂದು ರಿತ್ವಿಕ್ ಹೇಳಿದ್ದಾರೆ.
ಕರ್ಫ್ಯೂ ಸಮಯದ ಸದುಪಯೋಗ: ಬರವಣಿಗೆಯಲ್ಲಿ ತೊಡಗಿಕೊಂಡ ನಟ ರಿತ್ವಿಕ್ ಮಠದ್ - ಗಿಣಿರಾಮ ರಿತ್ವಿಕ್ ಮಠದ್,
ಕೊರೊನಾ ವೈರಸ್ ಹಾವಳಿಯಿಂದಾಗಿ ಮತ್ತೆ ರಾಜ್ಯದಲ್ಲಿ ಜನತಾ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ಸೀರಿಯಲ್ ಶೂಟಿಂಗ್ ನಿಂತಿದೆ. 'ಗಿಣಿರಾಮ' ಧಾರಾವಾಹಿ ನಟ ರಿತ್ವಿಕ್ ಮಠದ್ ಬರವಣಿಗೆಯಲ್ಲಿ ತಲ್ಲೀನರಾಗಿದ್ದಾರೆ.
"ಎಲ್ಲರೂ ಆದಷ್ಟು ಮನೆಯಲ್ಲಿದ್ದು ಕೋವಿಡ್ ಪ್ರಕರಣಗಳು ಏರಿಕೆಯಾಗುವುದನ್ನು ತಪ್ಪಿಸಿ. ಈ ರೋಗ ಈಗಾಗಲೇ ವಿಶ್ವದಾದ್ಯಂತ ಕೋಟ್ಯಂತರ ಜನರನ್ನು ಬಾಧಿಸಿದೆ. ಈ ಸನ್ನಿವೇಶದಲ್ಲಿ ಹೊರಗಿನ ಕೆಲಸಗಳನ್ನು ಮಾಡದಿರುವುದು ಉತ್ತಮ. ಇದು ನಮ್ಮ ಸುರಕ್ಷತೆಗಾಗಿ ಕೆಲಸ ನಿರ್ವಹಿಸುವ ಕೊರೊನಾ ವಾರಿಯರ್ಸ್ ಒತ್ತಡವನ್ನು ಕಮ್ಮಿ ಮಾಡುತ್ತದೆ. ಕೋವಿಡ್ ಪ್ರೊಟೋಕಾಲ್ ಅನುಸರಿಸೋಣ. ಕೈಗಳನ್ನು ಆಗಾಗ ತೊಳೆದುಕೊಳ್ಳೋಣ. ಮಾಸ್ಕ್ ಧರಿಸೋಣ, ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ’ ಎಂದಿದ್ದಾರೆ.
ಅನುರೂಪ ಧಾರವಾಹಿಯ ನಂತರ ಹಿರಿತೆರೆಯಲ್ಲಿ ಕಮಾಲ್ ಮಾಡಿದ ರಿತ್ವಿಕ್ ಗಿಣಿರಾಮ ಧಾರಾವಾಹಿಯ ಮೂಲಕ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಉತ್ತರ ಕರ್ನಾಟಕದ ಭಾಷೆಯನ್ನು ಒಳಗೊಂಡ ಧಾರಾವಾಹಿ ಇದಾಗಿದ್ದು, ರಿತ್ವಿಕ್ ಅನಕ್ಷರಸ್ಥ, ಒರಟು ಯುವಕ ಶಿವರಾಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.