ಕರ್ನಾಟಕ

karnataka

ETV Bharat / sitara

'ಬೆವರು ಹರಿಸಿ ಮುನ್ನಡೆ'.. ಅನುಷ್ಕಾ ಶರ್ಮಾ 'ಚಕ್ಡಾ ಎಕ್ಸ್‌ಪ್ರೆಸ್‌' ಪೂರ್ವ ತಯಾರಿ ಹೀಗಿದೆ.. - ಅನುಷ್ಕಾ ಶರ್ಮಾ ಚಕ್ಡಾ ಎಕ್ಸ್‌ಪ್ರೆಸ್‌ ಸಿನಿಮಾ

ಗರ್ಭಿಣಿಯಾದ ನಂತರ ಮತ್ತೆ ಸಿನಿಮಾಗೆ ಮರಳುತ್ತಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮುಂಬರುವ ಚಿತ್ರ 'ಚಕ್ಡಾ ಎಕ್ಸ್‌ಪ್ರೆಸ್‌'ಗಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಈ ಕುರಿತಾದ ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ..

ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

By

Published : Mar 11, 2022, 2:06 PM IST

ಮುಂಬೈ: 'ಬ್ಯಾಂಡ್ ಬಾಜಾ ಬಾರಾತ್', 'ಸುಲ್ತಾನ್', 'ಸಂಜು' ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರಸ್ತುತ ತಮ್ಮ ಮುಂಬರುವ 'ಚಕ್ಡಾ ಎಕ್ಸ್‌ಪ್ರೆಸ್‌'ಗಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಈ ಕುರಿತಾದ ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಚಕ್ಡಾ ಎಕ್ಸ್‌ಪ್ರೆಸ್‌' ಸಿನಿಮಾಗಾಗಿ ಪೂರ್ವ ಸಿದ್ಧತೆಯಲ್ಲಿರುವ ಅನುಷ್ಕಾ ಇದೀಗ ಕ್ರಿಕೆಟ್ ಅಭ್ಯಾಸದ ವಿಡಿಯೋವನ್ನು ಪೋಸ್ಟ್ ಮಾಡಿ, 'ಬೆವರು ಹರಿಸಿ ಮುನ್ನಡೆ' ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಸಹ ಸಿನಿಮಾಕ್ಕೆ ಸಂಬಂಧಿಸಿದಂತೆ ಎರಡು ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಅನುಷ್ಕಾ ಪೋಸ್ಟ್​ಗೆ ಕ್ರಿಕೆಟರ್​​ ಜೂಲನ್ ಗೋಸ್ವಾಮಿ ಪ್ರತಿಕ್ರಿಯಿಸಿ, ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಿಶ್ವ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್‌ಗಳಲ್ಲಿವೊಬ್ಬರಾದ ಜೂಲನ್ ಗೋಸ್ವಾಮಿಯವರ ಅದ್ಭುತ ಪ್ರಯಾಣವನ್ನು ಆಧಾರವಾಗಿಟ್ಟುಕೊಂಡು 'ಚಕ್ಡಾ ಎಕ್ಸ್‌ಪ್ರೆಸ್‌' ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

ಇದರಲ್ಲಿ ಅನುಷ್ಕಾ ಜೂಲನ್ ಪಾತ್ರದಲ್ಲಿ ನಟಿಸುತ್ತಿದ್ದು, ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ದೇಹ ಮತ್ತು ಫಿಟ್‌ನೆಸ್​ಗಾಗಿ​​ ತಯಾರಿ ನಡೆಸ್ತಿದ್ದಾರೆ.

ಇದನ್ನೂ ಓದಿ:ಸ್ಪೇನ್‌ನಲ್ಲಿ ದೀಪಿಕಾ ಶಾರುಖ್​ ರೊಮ್ಯಾನ್ಸ್.. ರಣ್​ವೀರ್​ ಸಿಂಗ್ ಹೇಳಿದ್ದಿಷ್ಟು

ABOUT THE AUTHOR

...view details