ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ಗೀತಾ ಸಿನಿಮಾ ಟೀಸರ್ನಿಂದಲೇ ಸೆನ್ಷೆಷನ್ ಕ್ರಿಯೇಟ್ ಮಾಡಿದೆ. ಗೋಕಾಕ್ ಚಳವಳಿಯ ಕಥೆ ಹೊಂದಿರುವ ಈ ಚಿತ್ರದಲ್ಲಿ ಕನ್ನಡ ಪ್ರೇಮ ಬಣ್ಣಿಸುವ ಗೀತೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಖತ್ ಜ್ಯೋಶ್ನಿಂದ ಹಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣಿ ಕನ್ನಡ ಹೋರಾಟಕ್ಕೆ ಪವರ್ ಸ್ಟಾರ್ ಗಾನ ಬಜಾನಾ..! - ವಿಜಯ್ ನಾಗೇಂದ್ರ
ಮಳೆ ಹುಡುಗ ಗಣೇಶ್ ನಟಿಸುತ್ತಿರುವ ಗೀತಾ ಚಿತ್ರಕ್ಕೆ ಪವರ್ ಸ್ಟಾರ್ ಹಾಡಿರುವ ಹೇ ಕನ್ನಡ ಕನ್ನಡ ಕನ್ನಡವೇ ಸತ್ಯ ಹಾಡು ರಿಲೀಸ್ ಆಗಿದೆ.
ಸದ್ಯ ಅಪ್ಪು ಹೇಳಿರುವ ಹೇ ಕನ್ನಡ ಕನ್ನಡ ಕನ್ನಡವೇ ಸತ್ಯ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ರಾಜಕುಮಾರ ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದು, ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ಯುವರತ್ನ ಹಾಡಿದ್ದಾರೆ. ಅನೂಪ್ ರುಬೆನ್ಸ್ ಈ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದು, ಈ ಹಾಡಿನ ಕೊನೆಯಲ್ಲಿ ಗಣೇಶ್ ಧ್ವನಿಯಾಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಕನ್ನಡ ಹಾಡು ಸದ್ದು ಮಾಡುತ್ತಿದೆ.
ಇನ್ನು ಮಿಸ್ಟರ್ ಅಂಡ್ ಮಿಸೆಸ್ ಹಾಗೂ ರಾಜಕುಮಾರ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ವಿಜಯ್ ನಾಗೇಂದ್ರ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ಗಣಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಗೀತಾ ಸಿನಿಮಾ ತೆರೆಗೆ ಬರಲಿದೆ.