ಕೆಲ ದಿನಗಳ ಹಿಂದೆ ನಟಿ ಶಾನ್ವಿ ಶ್ರೀವಾತ್ಸವ್ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿನ ತಾರತಮ್ಯ, ನಿರ್ದೇಶಕನ ವಿರುದ್ಧ, ಸಿನಿಮಾ ಕಥೆ ಹಾಗೂ ಸಂಭಾವನೆ ವಿಷಯಕ್ಕೆ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದರು. ಆದ್ರೆ ಅದು ಯಾವ ನಿರ್ದೇಶಕ? ಸಿನಿಮಾ? ಅನ್ನೋದು ಮಾತ್ರ ತಿಳಿದಿರಲಿಲ್ಲ. ಆದರೆ ಈ ಎಲ್ಲಾ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಹೌದು, ಶಾನ್ವಿ ಶ್ರೀವಾತ್ಸವ್ ತಮ್ಮ ಟ್ವಟರ್ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಬೇರಾರಿಗೂ ಅಲ್ಲ ಗೀತಾ ಸಿನಿಮಾ ನಿರ್ದೇಶಕ ವಿಜಯ್ ನಾಗೇಂದ್ರ ವಿರುದ್ಧ. ಅಷ್ಟಕ್ಕೂ ಶಾನ್ವಿ ಶ್ರೀವಾತ್ಸವ್ ಪತ್ರದಲ್ಲಿ ಬರೆದಿರುವುದಾದರೂ ಏನು ಎಂಬ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಶಾನ್ವಿ ಶ್ರೀವಾತ್ಸವ್ ಆರೋಪಕ್ಕೆ ಉತ್ತರ ಕೊಟ್ಟ ಗೀತಾ ಸಿನಿಮಾ ನಿರ್ದೇಶಕ
ಸಿನಿಮಾಗೆ ಹೋಗುವ ಮುನ್ನ ಹೇಳಿ ಹೋದ ಕಥೆ ಸಿನಿಮಾ ಸೆಟ್ಟಿಗೆ ಹೋದಾಗ ಯಾಕೆ ಬದಲಾಗುತ್ತದೆ. ಅವರಿಗೆ ಇಷ್ಟ ಬಂದ ಹಾಗೆ ಚಿತ್ರ ಕಥೆಯನ್ನು ಬದಲು ಮಾಡುತ್ತಾರೆ. ಇದರಿಂದ ನಟ, ನಟಿಯರ ದಾರಿ ತಪ್ಪಿಸುತ್ತಿದ್ದಾರೆ. ಈ ರೀತಿ ಅನೈತಿಕ, ಸುಳ್ಳು ಭರವಸೆಯನ್ನು ಕೊಟ್ಟು ಕಲಾವಿದರಿಗೆ ಮೋಸ ಮಾಡಬೇಡಿ ಎಂದು ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚುತ್ತಿವೆ. ಇದರಿಂದ ನಟಿಯರಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ. ನಟರಿಗೆ ನೀಡುವ ಸಂಭಾವನೆಗೂ, ನಮಗೆ ನೀಡುವ ಸಂಭಾವನೆಗೂ ಬಹಳ ವ್ಯತ್ಯಾಸಗಳು ಕಂಡು ಬರುತ್ತಿದೆ. ನಟಿಯ ವಿರುದ್ಧ ನಿರ್ದೇಶಕರು ಹೇರುವ ದೂರನ್ನು ನಾನು ಖಂಡಿಸುತ್ತೇನೆ. ನಟಿಯರು ಸರಿಯಾಗಿ ಶೂಟಿಂಗ್‍ಗೆ ಬರಲ್ಲ. ಅವರು ಸಿನಿಮಾದ ಚಿತ್ರೀಕರಣ ಮುಗಿದ ನಂತರ ಪ್ರೋಮೋಷನ್ಗಳಿಗೆ ಬರುವುದಿಲ್ಲ ಎಂಬ ಆರೋಪಗಳ ಸುರಿಮಳೆಯನ್ನೆ ಸುರಿಸಿದ್ದಾರೆ.
ಗೀತಾ ಸಿನಿಮಾದ ಸೆಕೆಂಡ್ ಆಫ್ನಲ್ಲಿ ಹೆಚ್ಚಿನ ಲೆಂಥ್ ಆಯಿತೆಂದು ಶಾನ್ವಿ ಶ್ರೀವಾತ್ಸವ್ಗೆ ಒಂದು ಮಾತು ಕೇಳದೆ ಹಾಡಿಗೆ ಕತ್ತರಿ ಹಾಕಲಾಗಿದೆ. ಇದೇ ಕಾರಣಕ್ಕೆ ಶ್ವಾನಿ ನಮ್ಮ ಮೇಲೆ ಕೋಪಗೊಂಡು ಈ ರೀತಿಯ ಪೋಸ್ಟ್ ಮಾಡಿದ್ದಾರೆ ಎಂದು ನಿರ್ದೇಶಕ ವಿಜಯ ನಾಗೇಂದ್ರ ಹಾಗೂ ಕಾರ್ಯಕಾರಿ ನಿರ್ಮಾಪಕ ಸನತ್ ಗೀತಾ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.