'ಗೀತಾ' ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಸೂಪರ್ ಹಿಟ್ ಚಿತ್ರದ ಹೆಸರು. ಇದೇ ಹೆಸರಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಸ ಸಿನಿಮಾ ತಯಾರಾಗಿದೆ. ಇದೀಗ ಈ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ.
ಅಣ್ಣಾವ್ರಂತೆ ಕನ್ನಡ ಹೋರಾಟದ ಅಖಾಡಕ್ಕೆ ಇಳಿದ ಗೋಲ್ಡನ್ ಸ್ಟಾರ್...'ಗೀತಾ' ಟ್ರೇಲರ್ ಬಿಡುಗಡೆ - ಗೋಕಾಕ್ ಚಳವಳಿಯ ಕಥೆ
ಗೋಲ್ಡನ್ ಸ್ಟಾರ್ ಗಣೇಶ್ ಎರಡು ಶೇಡ್ಗಳಲ್ಲಿ ನಟಿಸಿರುವ 'ಗೀತಾ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಲವರ್ ಬಾಯ್ ಹಾಗೂ ಕನ್ನಡ ಹೋರಾಟಗಾರನಾಗಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಗಣೇಶ್ ಹಾಗೂ ಸಯ್ಯದ್ ಸಲಾಮ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಟೀಸರ್ ಹಾಗೂ ಪೋಸ್ಟರ್ನಿಂದ ಸೆನ್ಸೇಷನ್ ಹುಟ್ಟುಹಾಕಿರುವ ಸಿನಿಮಾ 'ಗೀತಾ'. ಕ್ಯೂಟ್ ಲವ್ ಸ್ಟೋರಿ ಜೊತೆಗೆ ಕನ್ನಡ ಅಭಿಮಾನ ಸಾರುವ ಅಂಶಗಳು ಟ್ರೇಲರ್ನಲ್ಲಿ ಕಾಣುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ್ ಹಾಗೂ ಪ್ರಯಾಗಾ ಮಾರ್ಟಿನ್ ಹೀಗೆ ಮೂವರು ನಾಯಕಿಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಮೂವರು ಹೀರೋಯಿನ್ಗಳಲ್ಲಿ ಗೀತಾ ಯಾರು ಅನ್ನೋದು ಮಾತ್ರ ರಿವೀಲ್ ಆಗಿಲ್ಲ. ಲವರ್ ಬಾಯ್ ಜೊತೆಗೆ ಕನ್ನಡ ಹೋರಾಟಗಾರನಾಗಿ ಗಣೇಶ್ ಆರ್ಭಟಿಸಿದ್ದಾರೆ. 'ಅಣ್ಣಾವ್ರೇ ಅಖಾಡಕ್ಕೆ ಇಳಿದ ಮೇಲೆ..ಅಖಾಡ ನಮ್ಮದೇ' ಅಂತಾ ಗಣೇಶ್ ಬೊಂಬಾಟ್ ಡೈಲಾಗ್ ಕೂಡಾ ಹೊಡೆದಿದ್ದಾರೆ.
ಈ ಸಿನಿಮಾ ಗೋಕಾಕ್ ಚಳವಳಿಯ ಕಥೆ ಒಳಗೊಂಡಿದೆ. ಸುಧಾರಾಣಿ ಗಣೇಶ್ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಅಚ್ಯುತ್ ಕುಮಾರ್ ,ದೇವರಾಜ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಹಾಗೂ 'ರಾಜಕುಮಾರ' ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ, ವಿಜಯ್ ನಾಗೇಂದ್ರ 'ಗೀತಾ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಿಲ್ಪಾ ಗಣೇಶ್ ಹಾಗೂ ಸಯ್ಯದ್ ಸಲಾಂಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೇ ಸೆಪ್ಟೆಂಬರ್ 27ಕ್ಕೆ 'ಗೀತಾ' ಸಿನಿಮಾ ಬಿಡುಗಡೆಯಾಗುತ್ತಿದೆ. ಬ್ರೇಕ್ಗಾಗಿ ಕಾಯುತ್ತಿರುವ ಗಣೇಶ್ ಅವರ ಎರಡು ಶೇಡ್ ಪ್ರೇಕ್ಷಕರಿಗೆ ಎಷ್ಟು ಕಿಕ್ ಕೊಡಲಿದೆ ಈ ತಿಂಗಳ ಕೊನೆಯಲ್ಲಿ ತಿಳಿಯಲಿದೆ.