ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತಮಿಳಿನ '96' ಚಿತ್ರದ ಕನ್ನಡ ರೀಮೇಕ್ '99' ಸಿನಿಮಾಗೆ ಅಷ್ಟಾಗಿ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಗಣೇಶ್ ಅವರ ಹೊಸ ಲುಕ್ಅನ್ನು ಅಭಿಮಾನಿಗಳು ಇಷ್ಟಪಡಲಿಲ್ಲ. ಅವರ ಅಭಿನಯದ ಇನ್ನೂ 3-4 ಚಿತ್ರಗಳು ತೆರೆ ಕಾಣಬೇಕಿದೆ.
ಗೋಲ್ಡನ್ ಸ್ಟಾರ್ ಜನ್ಮ ದಿನಕ್ಕೆ 'ಗೀತಾ' ಟೀಸರ್ ರಿಲೀಸ್ - undefined
ಜುಲೈ 2ರಂದು ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಗಾಗಿ ಚಿತ್ರತಂಡ ಆ ದಿನ 'ಗೀತಾ' ಚಿತ್ರದ ಟೀಸರನ್ನು ಬಿಡುಗಡೆ ಮಾಡಲಿದೆ.
ಇನ್ನು ಗಣೇಶ್ ಜುಲೈ 2ರಂದು 41ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಭಿಮಾನಿಗಳು, ಕುಟುಂಬ ವರ್ಗದ ಜೊತೆ ಗೋಲ್ಡನ್ ಸ್ಟಾರ್ ಜನುಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತಡೇ ಅಂಗವಾಗಿ ಅಭಿಮಾನಿಗಳನ್ನು ಖುಷಿಪಡಿಸಲು ‘ಗೀತಾ’ ಚಿತ್ರತಂಡ ಅಂದು ಮೊದಲ ಟೀಸರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ‘ಚಮಕ್‘ ಯಶಸ್ಸಿನ ನಂತರ ‘99‘ ಸಿನಿಮಾ ನಿರೀಕ್ಷೆಯನ್ನು ಹುಸಿಗೊಳಿಸಿತು. ‘ಗಿಮಿಕ್‘, ‘ಗೀತಾ‘, ಚಿತ್ರಗಳು ವಿವಿಧ ಹಂತದಲ್ಲಿವೆ. ‘ವೇರ್ ಈಸ್ ಮೈ ಕನ್ನಡಕ‘ ಚಿತ್ರೀಕರಣ ಶುರು ಆಗಬೇಕಿದೆ. ‘ಗೀತಾ’ ಚಿತ್ರತಂಡ ಟೀಸರ್ ರೆಡಿ ಮಾಡಿಕೊಂಡು ಗಣೇಶ್ ಹುಟ್ಟಿದಹಬ್ಬಕ್ಕಾಗಿ ಕಾಯುತ್ತಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ಅದು ಮುಗಿದರೆ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ದೊರೆಯಲಿದೆ.
‘ಗೀತಾ‘ ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶಿಸಿದ್ದು, ಆಗಸ್ಟ್ ವೇಳೆಗೆ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಚಿತ್ರದಲ್ಲಿ ಪಾರ್ವತಿ ಅರುಣ್, ಪ್ರಯಾಗ್, ಶಾನ್ವಿ ಶ್ರೀವಾತ್ಸವ್ ಮೂವರು ನಾಯಕಿಯರಿದ್ದಾರೆ. ಮುಗುಳು ನಗೆ ನಿರ್ಮಾಪಕ ಸಯ್ಯದ್ ಸಲಾಂ ಹಾಗೂ ಗೋಲ್ಡನ್ ಮೂವೀಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದೇವರಾಜ್, ಅಚ್ಯುತ್ ಕುಮಾರ್, ಸುಧಾರಾಣಿ, ರಂಗಾಯಣ ರಘು ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ. ಗಣೇಶ್ ಪುತ್ರ ವಿಹಾನ್ ಗಣೇಶ್ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.