ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ಬೆಳಕಿಗೆ ಬಂದ ತಕ್ಷಣ ಸೈಲೆಂಟಾಗಿ ಐಎಸ್ಡಿ ತನಿಖೆಗಿಳಿದು ಕಿರುತೆರೆಯ ನಟ-ನಟಿಯರನ್ನ ವಿಚಾರಣೆಗೆ ಒಳಪಡಿಸಿದೆ. ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾ ಭಾರತಿ ಭಟ್ಗೆ ಕೂಡ ನೋಟಿಸ್ ನೀಡಿದ್ದು, ಇದೀಗ ಅವರು 5 ಗಂಟೆ ವಿಚಾರಣೆ ಮುಗಿಸಿ ಹೊರಬಂದಿದ್ದಾರೆ.
ಡ್ರಗ್ಸ್ ಪ್ರಕರಣ: ವಿಚಾರಣೆ ಮುಗಿಸಿ ಬಂದ ಬ್ರಹ್ಮಗಂಟು ನಟಿ ಹೇಳಿದ್ದೇನು? ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಡ್ರಗ್ಸ್ ಪೆಡ್ಲರ್ ಅಲ್ಲ, ನನ್ನ ವಿಚಾರಣೆಗೆ ಕರೆದಿದ್ರು, ಹಾಗಾಗಿ ಬಂದಿದ್ದೆ. ಬಂದಿತ ಪೆಡ್ಲರ್ ಓರ್ವನ ಬಳಿ ನನ್ನ ಕಾಲ್ ಡಿಟೇಲ್ಸ್ ಇತ್ತು. ಹೀಗಾಗಿ ನನಗೆ ಕೆಲ ಕಾಲ್ ಡಿಟೇಲ್ಸ್ ಬಗ್ಗೆ ಕೇಳಿದ್ದಕ್ಕೆ ಮಾಹಿತಿ ಕೊಟ್ಟಿದ್ದೇನೆ. ಹಾಗೆ ಅವರು ಕೇಳಿದ ಮಾಹಿತಿಗೆ ಉತ್ತರ ನೀಡಿದ್ದೇನೆ.
ಒಟ್ಟು ನನಗೆ ಐಎಸ್ಡಿ ಅಧಿಕಾರಿಗಳು 40 ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಸರಿಯಾಗಿ ಉತ್ತರ ಕೊಟ್ಟಿದ್ದೇನೆ. ನನ್ನ ಬಗೆಗಿ ಯಾವುದೇ ಊಹಾಪೋಹಗಳ ಬಗ್ಗೆ ಕಿವಿಗೊಡಬೇಡಿ. ನನಗೆ ಮಂದಿನ ವಿಚಾರಣೆಗೆ ಬರಲು ಹೇಳಿಲ್ಲ ಮತ್ತೆ ವಿಚಾರಣೆಗೆ ಕರೆದರೆ ಖಂಡಿತವಾಗಿ ಬರ್ತೇನೆ ಎಂದು ಸ್ಪಷ್ಟಪಡಿಸಿದರು.
ಹಾಗೆ ನಾನು ಯಾವುದೇ ಪಾರ್ಟಿಗಳಿಗೆ ಹೋಗಲ್ಲ. ನನಗೆ ಗೊತ್ತಿರೋರ ಬಳಿ ಯಾರ ಬಳಿ ಬೇಕಾದ್ರು ಕೇಳಿ. ನನ್ನ ಮೊಬೈಲ್ ಸಹ ಚೆಕ್ ಮಾಡಿದ್ರು. ನಾನು ಯಾರಿಗೆ ಕಾಲ್ ಮಾಡಿದ್ದೇನೆ. ನನಗೆ ಯಾರ ಕಡೆಯಿಂದ ಕಾಲ್ ಬಂದಿವೆ ಅದರ ಬಗ್ಗೆ ಚೆಕ್ ಮಾಡಿದ್ರು ಎಂದು ನಟಿ ಗೀತಾ ಭಾರತಿ ಭಟ್ ವಿವರಿಸಿದರು.