ಬೆಂಗಳೂರು:ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ಬೆನ್ನತ್ತಿದ್ದ ಸಿಸಿಬಿ ಬೆನ್ನಲ್ಲೇ ಐಎಸ್ಡಿ ಕೂಡಾ ಕಾರ್ಯ ಪ್ರವೃತ್ತವಾಗಿದ್ದು ಸದ್ಯ ಐಎಸ್ಡಿ ನೋಟೀಸ್ಗೆ ಕಿರುತೆರೆ ನಟಿ ಗೀತಾ ಭಾರತಿ ಭಟ್ ಹಾಗೂ ನಿರೂಪಕ ಅಭಿಷೇಕ್ ಇಂದು ಶಾಂತಿನಗರ ಕಚೇರಿ ಬಳಿ ವಿಚಾರಣೆಗೆ ಹಾಜರಾಗಿದ್ದಾರೆ.
ಐಎಸ್ಡಿ ಕಚೇರಿಗೆ ವಿಚಾರಣೆಗೆ ಹಾಜರಾದ ಅಭಿಷೇಕ್, ಗೀತಾ ಭಾರತಿ ಭಟ್
ಐಎಸ್ಡಿ ನೋಟೀಸ್ಗೆ ಪ್ರತಿಕ್ರಿಯಿಸಿರುವ ಕಿರುತೆರೆ ನಟಿ ಗೀತಾ ಭಾರತಿ ಭಟ್ ಹಾಗೂ ನಿರೂಪಕ ಅಭಿಷೇಕ್ ದಾಸ್ ಇಂದು ಶಾಂತಿ ನಗರದ ಐಎಸ್ಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಷೇಕ್, ಶನಿವಾರ ನನಗೆ ನೋಟೀಸ್ ಬಂತು. ನಿನ್ನೆ ರಾತ್ರಿ ಐಎಸ್ಡಿ ಅಧಿಕಾರಿಯೊಬ್ಬರು ನನಗೆ ಕರೆ ಮಾಡಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ಆತ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ತಿಳಿಯಬೇಕಿದೆ ನಿಮಗೆ ಏನು ವಿಚಾರ ಗೊತ್ತಿದೆಯೋ ಅದನ್ನು ಹೇಳಿ ಎಂದರು. ನನಗೆ ಗೊತ್ತಿರುವುದನ್ನು ಹೇಳುತ್ತೇನೆ ಎಂದು ಅಭಿಷೇಕ್ ದಾಸ್ ಹೇಳಿದ್ದಾರೆ.
19 ರಂದು ಐಎಸ್ಡಿ ಅಧಿಕಾರಿಗಳು ನನಗೆ ಕರೆ ಮಾಡಿ ವಿಚಾರಣೆಗೆ ಹಾಜರಾಗಲು ಕರೆದಿದ್ದರು. ಅಧಿಕಾರಿಗಳು ಏನು ಕೇಳುತ್ತಾರೋ ನನಗೆ ತಿಳಿದಿರುವುದನ್ನು ಹೇಳುತ್ತೇನೆ ಎಂದು ಗೀತಾ ಭಾರತಿ ಭಟ್ ಹೇಳಿದ್ದಾರೆ.