ನಾಳೆ ಗಾಂಧಿ ಜಯಂತಿ ಅಂಗವಾಗಿ ಹೆಸರಾಂತ ಗೀತಸಾಹಿತಿ, ನಟ, ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ್ ಪುತ್ರಿ ಕುಮಾರಿ ದಿವಿಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಗಾಂಧಿ ಮತ್ತು ನೋಟು' ಚಿತ್ರದ ಪೋಸ್ಟರ್ ಬಿಡುಗಡೆ ಆಗಲಿದೆ. ಅಕ್ಟೋಬರ್ 2 ದಿವಿಜಾ ಹುಟ್ಟುಹಬ್ಬ ಕೂಡಾ.
ಬೇಬಿ ದಿವಿಜಾ ನಟಿಸಿರುವ 'ಗಾಂಧಿ ಮತ್ತು ನೋಟು' ಪೋಸ್ಟರ್ ನಾಳೆ ರಿಲೀಸ್ - October 2nd Gandhi Jayanti
ಗಾಂಧೀಜಿ ಮೌಲ್ಯಗಳನ್ನು ಸಾರುವ 'ಗಾಂಧಿ ಮತ್ತು ನೋಟು' ಮಕ್ಕಳ ಚಿತ್ರದ ಪೋಸ್ಟರ್ ನಾಳೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಪುತ್ರಿ ದಿವಿಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಬಿ.ಎಸ್. ಸುಧೀಂದ್ರ ಅವರ ಆಶೀರ್ವಾದದೊಂದಿಗೆ, ಭಾವನಾ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಪಿ.ಕೆ. ಮುರುಗನ್ ಅರ್ಪಿಸುವ 'ಗಾಂಧಿ ಮತ್ತು ನೋಟು' ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದೊಂದು ಗಾಂಧೀಜಿಯವರ ತತ್ವ, ಸಿದ್ಧಾಂತ, ಮೌಲ್ಯಗಳನ್ನು ಮಾಪನ ಮಾಡಲು ಯತ್ನಿಸುತ್ತಿರುವ ಕಥೆ. ಯೋಗಿ ದೇವಗಂಗೆ ಈ ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕಾಡಂಚಿನ ಹಳ್ಳಿಯಿಂದ ಓದಿಗಾಗಿ ನಡೆದು ಬರುವ ಹುಡುಗಿ ಸುಕ್ರಿ ಗಾಂಧೀಜಿಯವರ ಆದರ್ಶಗಳನ್ನು ಹೇಗೆ ಜಗತ್ತಿಗೆ ತಿಳಿಸುವಳು ಎಂಬುದು ಚಿತ್ರದ ಕಥಾವಸ್ತು. ಸುಕ್ರಿ ಪಾತ್ರದಲ್ಲಿ ಕುಮಾರಿ ದಿವಿಜಾ ನಾಗೇಂದ್ರಪ್ರಸಾದ್ ಅಭಿನಯಿಸಿದ್ದಾರೆ. ದಿವಿಜಾ ಜೊತೆ ಸಾಕಷ್ಟು ರಂಗಭೂಮಿ ಕಲಾವಿದರು ಚಿತ್ರದಲ್ಲಿ ಅಭಿಯಿಸಿದ್ದಾರೆ. ಸುಧಾರಾಣಿ ಹೆಚ್.ಆರ್. ಮೇಲುಕೋಟೆ, ಹೆಚ್.ಕೆ. ವೀಣಾ ಪದ್ಮನಾಭ ಮತ್ತು ಮಂಜುನಾಥ್ ಬಿ.ಎನ್ ಈ ಚಿತ್ರದ ನಿರ್ಮಾಪಕರು. ವಾಣಿ ಹರಿಕೃಷ್ಣ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅಚ್ಚು ಸುರೇಶ್ ಛಾಯಾಗ್ರಹಣ, ವಸಂತಕುಮಾರ್ ಸಂಕಲನವಿದೆ.