ಶಿವಮೊಗ್ಗ:ಗರುಡ ಗಮನ ವೃಷಭ ವಾಹನಸಿನಿಮಾ ರಾಜ್ಯದೆಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ರಾಜ್ ಬಿ ಶೆಟ್ಟಿ ಇಂದು ಶಿವಮೊಗ್ಗಕ್ಕೆ ಆಗಮಿಸಿ ಚಿತ್ರದ ಯಶಸ್ಸಿಗಾಗಿ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾಗಳನ್ನು ಮಾಡಲು ಪ್ರೇರಣೆ ನೀಡಿದ್ದೇ ಶಿವಮೊಗ್ಗ ಜಿಲ್ಲೆ. ನಾನು ಹುಟ್ಟಿದ್ದು ಇಲ್ಲಿನ ಭದ್ರಾವತಿಯಲ್ಲಿ.
ಅಲ್ಲದೇ ಮೂರನೇ ತರಗತಿವರೆಗೂ ಇಲ್ಲಿಯೇ ವ್ಯಾಸಂಗ ಮಾಡಿದ್ದೇನೆ. ಬಳಿಕ ನಮ್ಮ ಕುಟುಂಬ ಮಂಗಳೂರಿಗೆ ವಲಸೆ ಹೋದೆವು. ಹೀಗಾಗಿ, ಜಿಲ್ಲೆಗೂ ಮತ್ತು ನನಗೂ ವಿಶೇಷ ಸಂಬಂಧವಿದೆ ಎಂದರು.