ನ್ಯೂಯಾರ್ಕ್ ಫಿಲಂ ಫೆಸ್ಟಿವಲ್ವನಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಬಾಚಿರುವ ಕನ್ನಡದ 'ಗಂಟುಮೂಟೆ' ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2 ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ವರ್ಕ್ ಮಾಡಿದ್ದ ರೂಪ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರ ಪ್ರಪಂಚದಾದ್ಯಂತ ಸದ್ದು ಮಾಡಿಕೊಂಡು ಬಂದು ಈಗ ತವರು ನೆಲದಲ್ಲಿ ಇದೇ ಅಕ್ಟೋಬರ್ 18ರಂದು ರಿಲೀಸ್ ಆಗ್ತಿದೆ.
ಹಲವು ದೇಶ ಸುತ್ತಾಡಿ ಬಂದು ತವರಲ್ಲಿ ರಿಲೀಸ್ ಆಗ್ತಿದೆ 'ಗಂಟು ಮೂಟೆ'.. - ಗಂಟು ಮೂಟೆ ಅಕ್ಟೋಬರ್ 18ಕ್ಕೆರಿಲೀಸ್
ಕೋಟಿಗೊಬ್ಬ-2 ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ವರ್ಕ್ ಮಾಡಿದ್ದ ರೂಪ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರ ಪ್ರಪಂಚದಾದ್ಯಂತ ಸದ್ದು ಮಾಡಿಕೊಂಡು ಬಂದು ಈಗ ತವರು ನೆಲದಲ್ಲಿ ಇದೇ ಅಕ್ಟೋಬರ್ 18ರಂದು ರಿಲೀಸ್ ಆಗ್ತಿದೆ.
![ಹಲವು ದೇಶ ಸುತ್ತಾಡಿ ಬಂದು ತವರಲ್ಲಿ ರಿಲೀಸ್ ಆಗ್ತಿದೆ 'ಗಂಟು ಮೂಟೆ'..](https://etvbharatimages.akamaized.net/etvbharat/prod-images/768-512-4734161-thumbnail-3x2-giri.jpg)
ಈ ಚಿತ್ರವನ್ನು ದ್ವಾರಕೀಶ್ ಚಿತ್ರಾಲಯ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದು, ಚಿತ್ರವನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿರುವುದಾಗಿ ವಿತರಕ ಯೋಗೀಶ್ ದ್ವಾರಕೀಶ್ ತಿಳಿಸಿದ್ರು.
90ರ ದಶಕದ ಸ್ಟೈಲ್‌ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಾಯಕನಾಗಿ ನಿಶ್ಚಿತ್ ಕೊರೋಡಿ ನಟಿಸಿದ್ರೆ, ನಾಯಕಿಯಾಗಿ ಪ್ರಕಾಶ್ ಬೆಳವಾಡಿ ಅವರ ಮಗಳಾದ ತೇಜು ಬೆಳವಾಡಿ ನಟಿಸಿದ್ದಾರೆ. ಹುಡುಗಿಯ ದೃಷ್ಟಿಕೋನದಲ್ಲಿ ಗಂಟುಮೂಟೆ ಚಿತ್ರವನ್ನು ನಿರೂಪಣೆ ಮಾಡಿದ್ದು, ತುಂಭಾ ನವೀರಾದ ಕಥೆಯನ್ನು ನಮ್ಮ ಚಿತ್ರ ಹೊಂದಿದೆ. ಅಲ್ಲದೆ ಕಿಚ್ಚ ಸುದೀಪ್ ನಮ್ಮ ಚಿತ್ರದ ಟ್ರೈಲರ್ ನೋಡಿ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಇದು ನಮ್ಮ ತಂಡದ ಆತ್ಮಸ್ಥೈರ್ಯ ಹೆಚ್ಚಿಸಿದೆ. ಅಲ್ಲದೆ ನಮ್ಮ ಚಿತ್ರ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಿದ್ದು ಹಂತ ಹಂತವಾಗಿ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರದ ನಿರ್ದೇಶಕಿ ರೂಪ ರಾವ್ ತಿಳಿಸಿದರು.