ಕರ್ನಾಟಕ

karnataka

By

Published : Oct 24, 2020, 7:12 PM IST

ETV Bharat / sitara

'ಅಪ್ಪು'ಗೆ ವ್ಯಕ್ತಿಚಿತ್ರ ಕೊಟ್ಟು ಪವರ್​​ ಸ್ಟಾರ್​​​ನಿಂದ ಗಿಫ್ಟ್​​ ಪಡೆದ ಗಂಗಾವತಿ ಬಾಲಕಿ

ಗಂಗಾವತಿ ಎಪಿಎಂಸಿಯ ಸದಸ್ಯ ಶರಣೇಗೌಡ ರಾರಾವಿ ಅವರ ಪುತ್ರಿ ಆರ್.ಮೇಘಾ ಅಪ್ಪುಗೆ ಅವರ ವ್ಯಕ್ತಿ ಚಿತ್ರ ಬಿಡಿಸಿ ಗಿಫ್ಟ್​​ ಮಾಡಿದ್ದಾರೆ. ಬಾಲಕಿ ಕೊಟ್ಟ ಚಿತ್ರವನ್ನು ಪಡೆದ ಪುನೀತ್ ಪ್ರತಿಯಾಗಿ ಆಕೆಗೆ ಪಿಆರ್​ಕೆ ಸಂಸ್ಥೆಯ ಚಿಹ್ನೆ ಇರುವ ಕುಡಿಯುವ ನೀರಿನ ಬಾಟಲಿ ನೀಡಿದ್ದಾರೆ.

Gangavali girl  received a gift from puneeth rajkumar
'ಅಪ್ಪು'ಗೆ ವ್ಯಕ್ತಿಚಿತ್ರ ಕೊಟ್ಟು ಪವರ್​​ ಸ್ಟಾರ್​​​ನಿಂದ ಗಿಫ್ಟ್​​ ಪಡೆದ ಗಂಗಾವತಿ ಬಾಲಕಿ

ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಗೂ ಹೃದಯವಂತ ನಟ ಎಂದು ಗುರುತಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್​​​ ರಾಜ್​​ಕುಮಾರ್​​, ತಮ್ಮ ಅಭಿಮಾನಿಗಳಿಗೆ ಎಂದೂ ಬೇಸರ ಮೂಡಿಸಿಲ್ಲ. ಇದೀಗ ಗಂಗಾವತಿಯ ಬಾಲಕಿಗೆ ಗಿಫ್ಟ್ ಕೊಟ್ಟು ಗಮನ ಸೆಳೆದಿದ್ದಾರೆ.

ಆರ್.ಮೇಘಾ ಮತ್ತು ಪುನೀತ್​​ ರಾಜ್​ಕುಮಾರ್​​

ಗಂಗಾವತಿ ಎಪಿಎಂಸಿಯ ಸದಸ್ಯ ಶರಣೇಗೌಡ ರಾರಾವಿ ಅವರ ಪುತ್ರಿ ಆರ್.ಮೇಘಾ ಅಪ್ಪುಗೆ ಅವರ ವ್ಯಕ್ತಿ ಚಿತ್ರ ಬಿಡಿಸಿ ಗಿಫ್ಟ್​​ ಮಾಡಿದ್ದಾರೆ. ಬಾಲಕಿ ಕೊಟ್ಟ ಚಿತ್ರವನ್ನು ಪಡೆದ ಪುನೀತ್ ಪ್ರತಿಯಾಗಿ ಆಕೆಗೆ ಪಿಆರ್​ಕೆ ಸಂಸ್ಥೆಯ ಚಿಹ್ನೆ ಇರುವ ಕುಡಿಯುವ ನೀರಿನ ಬಾಟಲಿ ನೀಡಿದ್ದಾರೆ. ಹಿರಿಯ ನಟನಿಂದ ಗಿಫ್ಟ್ ಪಡೆದುಕೊಂಡಿದ್ದಕ್ಕೆ ಬಾಲಕಿ ಇದೀಗ ಫುಲ್ ಖುಷ್ ಆಗಿದ್ದಾಳೆ.

ಮೇಘ ಬಿಡಿಸಿದ ಪುನೀತ್​​ ಚಿತ್ರ

ಸದ್ಯ ಗಂಗಾವತಿ ತಾಲೂಕಿನಲ್ಲಿ ಜೇಮ್ಸ್​​ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಬಿಡುವಿನ ವೇಳೆ ಜನ ಸಂಪರ್ಕಕ್ಕೆ ಸಿಗುತ್ತಿರುವ ಪವರ್​​ ಸ್ಟಾರ್​​ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟು ಹನುಮಂತನ ಆಶೀರ್ವಾದ ಪಡೆದಿದ್ದರು.

ಪಿಆರ್​ಕೆ ಸಂಸ್ಥೆಯ ಚಿಹ್ನೆ ಇರುವ ಕುಡಿಯುವ ನೀರಿನ ಬಾಟಲಿ

ABOUT THE AUTHOR

...view details