ಸ್ಟಾರ್ ಕಿಡ್ ಅಂದ್ರೇನೆ ಹಾಗೆ. ಅವರು ಏನೆ ಮಾಡಿದರೂ ಸುದ್ದಿ ಆಗ್ತಾನೆ ಇರತ್ತೆ. ಸ್ಟಾರ್ ನಟ ಅಥವಾ ನಟಿಯ ಮಕ್ಕಳು ಅಪ್ಪ ಅಮ್ಮನಷ್ಟೇ ಫೇಮಸ್ ಆಗ್ತಾರೆ. ಬಣ್ಣದ ಲೋಕಕ್ಕೆ ಎಂಟ್ರೀ ಕೊಡುತ್ತಿದ್ದಂತೆ ಅವರು ಮಾಡುವ ಸಣ್ಣ ಪುಟ್ಟ ತರ್ಲೆ ತಮಾಷೆಗಳು ಕೂಡ ಗಮನ ಸೆಳೆಯುತ್ತವೆ.
ಅರೇ... ಇವಾಗ ಯಾರು ಸುದ್ದಿಯಲ್ಲಿದ್ದಾರೆ. ಯಾವ ಸ್ಟಾರ್ ಮಕ್ಕಳು ಸುದ್ದಿಯಲ್ಲಿದ್ದಾರೆ ಅಂದ್ರಾ.. ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಮುದ್ದಾಗಿ ಆಮ್ಲೆಟ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾಳೆ.