ಕರ್ನಾಟಕ

karnataka

ETV Bharat / sitara

ರಾಕಿಂಗ್ ಸ್ಟಾರ್, ರಿಯಲ್ ಸ್ಟಾರ್ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಅದ್ಧೂರಿ ಆಚರಣೆ

ಬಾಲಿವುಡ್ ಅಲ್ಲದೆ ಸ್ಯಾಂಡಲ್​ವುಡ್​ನಲ್ಲೂ ಗೌರಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಕಿಂಗ್​ ಸ್ಟಾರ್​​ ಯಶ್​​​ ಮನೆಯಲ್ಲಿ ಗೌರಿ ಗಣೇಶನನ್ನ ಪ್ರತಿಷ್ಠಾಪಿಸುವ ಮೂಲಕ ಅದ್ಧೂರಿಯಾಗಿ ಹಬ್ಬ ಆಚರಿಸಿದ್ದಾರೆ.

ಗೌರಿ ಗಣೇಶ ಹಬ್ಬ

By

Published : Sep 2, 2019, 7:53 PM IST

ಉಪೇಂದ್ರ ಹಾಗು ಪ್ರಿಯಾಂಕಾ ಉಪೇಂದ್ರ ಒಟ್ಟಿಗೆ ಕುಳಿತುಕೊಂಡು, ಇಂದು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ರಾಕಿಂಗ್ ಸ್ಟಾರ್ ಮನೆಯಲ್ಲೂ ಈ ವರ್ಷದ ಗೌರಿ ಗಣೇಶ ಹಬ್ಬವನ್ನು ಮುದ್ದಿನ ಮಗಳು ಐರಾ ಜೊತೆ ಆಚರಿಸಿದ್ದಾರೆ.

ಸ್ಯಾಂಡಲ್​ವುಡ್ ಸ್ಟಾರ್ಸ್ ಮನೆಯಲ್ಲಿ ಹಬ್ಬದ ಸಂಭ್ರಮ

ಯಶ್ ಮತ್ತು ರಾಧಿಕಾ ಪಂಡಿತ್ ಈ ವರ್ಷದ ಗೌರಿ ಗಣೇಶ ಹಬ್ಬವನ್ನ ಮಗಳ ಜೊತೆ ಸೆಲೆಬ್ರೆಟ್ ಮಾಡಿದ್ದಾರೆ. ಇದರ ಜೊತೆಗೆ ಸುಂಟರಗಾಳಿ ರಕ್ಷಿತಾ ಮನೆಯಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

ರಿಯಲ್ ಸ್ಟಾರ್ ಮನೆಯಲ್ಲಿ ಜೋರಾಗಿದೆ ಗೌರಿ-ಗಣೇಶ ಹಬ್ಬ

ಐರಾ ಟ್ವೀಟ್​​:

ನಮ್ಮಪ್ಪ ತಿನ್ನೋ ಮುಂಚೆ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ ಎಂದು ಯಶ್​​ ಮಗಳು ಐರಾ ವಿಶ್​ ಮಾಡಿದ್ದಾಳೆ. ಈ ಟ್ವೀಟ್​ ಅನ್ನು ನಟ ಯಶ್​ ತಮ್ಮ ಅಕೌಂಟ್​​ನಲ್ಲಿ ಶೇರ್​​ ಮಾಡಿಕೊಂಡಿದ್ದು, ನಿಮ್ಮ ಈ ಪುಟ್ಟ ಗೌರಿಯಿಂದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು ಎಂದು ಮಗಳಿಂದ ಶುಭಾಶಯ ತಿಳಿಸಿದ್ದಾರೆ.

ABOUT THE AUTHOR

...view details