ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ 'ಗಾಳಿಪಟ -2' ಚಿತ್ರೀಕರಣ ಭರದಿಂದ ಸಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಮೂವರೂ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಯೂರೋಪ್ನಲ್ಲಿ ಬೀಡುಬಿಟ್ಟಿದೆ.
ಕಜಕಿಸ್ತಾನ ಕೈಟ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ ಗೋಲ್ಡನ್ ಸ್ಟಾರ್ ಗಣೇಶ್ - Ganesh fly son photo kite
ಕಜಕಿಸ್ತಾನದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮಗನ ಫೋಟೋ ಇರುವ ಗಾಳಿಪಟವನ್ನು ಹಾರಿಸಿದ್ದಾರೆ. ಈ ಫೋಟೋಗಳನ್ನು ಗಣೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ರಾಕಿ ಬಾಯ್
ಯೂರೋಪಿನ ಕಜಕಿಸ್ತಾನದಲ್ಲಿ 'ಗಾಳಿಪಟ -2' ಚಿತ್ರೀಕರಣ ನಡೆಯುತ್ತಿದೆ. ಕೊರೆಯುವ ಚಳಿಯಲ್ಲಿ ಚಿತ್ರತಂಡ ಭರದಿಂದ ಚಿತ್ರೀಕರಣ ಮಾಡುತ್ತಿದೆ. ನಟ ಗಣೇಶ್ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಕಜಕಿಸ್ತಾನದಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಎಂದರೆ ತಮ್ಮ ಮುದ್ದಿನ ಮಗ ವಿಹಾನ್ ಫೋಟೋ ಇರುವ ಗಾಳಿಪಟವನ್ನು ಗಣೇಶ್ ಕೈಟ್ ಫೆಸ್ಟಿವಲ್ನಲ್ಲಿ ಹಾರಿಸಿದ್ದಾರೆ. ಈ ಫೋಟೋಗಳನ್ನು ಗಣೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ 'ಗಾಳಿಪಟ 2' ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ ನಾಯಕಿಯರಾಗಿ ನಟಿಸಿದ್ದಾರೆ. 'ಪಡ್ಡೆಹುಲಿ' ಸಿನಿಮಾ ನಿರ್ಮಾಣದ ಮಾಡಿದ್ದ ರಮೇಶ್ ರೆಡ್ಡಿ 'ಗಾಳಿಪಟ 2' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.